ಮುಂಬೈ: ಉತ್ತರಪ್ರದೇಶ ವಿಶೇಷ ಪೊಲೀಸ್ ದಳ ತನ್ನ ವಶಕ್ಕೆ ತೆಗೆದುಕೊಂಡಿರುವ ಡಾ. ಖಫೀಲ್ ಖಾನ್ ಮುಂಬೈನಲ್ಲಿ ನೆಲೆಸಲು ತನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ತನಗೆ ಉತ್ತರ ಪ್ರದೇಶ ಪೊಲೀಸರ ಮೇಲೆ ನಂಬಿಕೆಯಿಲ್ಲ. ಗೋರಖ್ ಪುರ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗ ತನ್ನನ್ನು ಆರೋಪ ಮುಕ್ತಗೊಳಿಸಿದೆ. ಆದರೂ ಇದೀಗ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತಿದೆ ಎಂದು ಡಾ. ಖಾನ್ ಆರೋಪಿಸಿದ್ದಾರೆ. ಪೌರತ್ವ ಕಾನೂನು ವಿರೋಧಿ ಹೋರಾಟದಲ್ಲಿ ಡಾ. ಖಫೀಲ್ ಖಾನ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ