newsics.com
ಭೋಪಾಲ್(ಮಧ್ಯಪ್ರದೇಶ): ಬಟ್ಟೆ ಬದಲಿಸುವಾಗ ರಹಸ್ಯವಾಗಿ ತೆಗೆದ ವಿಡಿಯೋವನ್ನೇ ಅಸ್ತ್ರವನ್ನಾಗಿಸಿಕೊಂಡು ವಿವಾಹಿತೆಯ ಮೇಲೆ ಇಬ್ಬರು ವೃದ್ಧರು ಆಗಾಗ ಅತ್ಯಾಚಾರವೆಸಗಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ ಈ ಘಟನೆ ನಡೆದಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರು ಆರೋಪಿಗಳಾದ ಶಿವ ನಾರಾಯಣ್ ಪಾಂಡೆ (60) ಮತ್ತು ಆತನ ಸ್ನೇಹಿತ ದೇವೇಂದ್ರ ಪಾಂಡೆ (81) ಅವರನ್ನು ಸೋಮವಾರ ಬಂಧಿಸಿದ್ದಾರೆ.
ಆರೋಪಿ ಶಿವ ನಾರಾಯಣ್ ಭದ್ರತಾ ಏಜೆನ್ಸಿಯ ಮಾಲೀಕರಾಗಿದ್ದು, ಅವರ ಸ್ನೇಹಿತ ದೇವೇಂದ್ರ ರೇವಾ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಇಬ್ಬರೂ ಸ್ನೇಹಿತರು ಭದ್ರತಾ ಸಿಬ್ಬಂದಿಯ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಶಿವ ನಾರಾಯಣ್ ಅವರು ಮನೆಯ ಸಹಾಯಕರಾಗಿ ಕೆಲಸ ಮಾಡಲು ಭದ್ರತಾ ಸಿಬ್ಬಂದಿಯ ಪತ್ನಿಯನ್ನು ನೇಮಿಸಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಆಕೆ ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದಾರೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ವಿಡಿಯೋ ಕ್ಲಿಪ್ ಬಳಸಿಕೊಂಡ ಆರೋಪಿಗಳು ಆಕೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ.
ಮಹಿಳೆ ತನ್ನ ಗಂಡನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.
ಕೊರೋನಾ ಮೂರನೆ ಅಲೆ ಆರಂಭದ ಭೀತಿ, ಮಕ್ಕಳಲ್ಲಿ ಪ್ರತಿದಿನ 60 ಸೋಂಕು ಪತ್ತೆ
ಎಟಿಎಂ ನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ: ಆರ್ ಬಿ ಐ ಎಚ್ಚರಿಕೆ