ಕೋಲ್ಕತಾ: ವಸಂತ ಪಂಚಮಿ ನಿಮಿತ್ತ ಸರಸ್ವತಿ ಪೂಜೆ ನಿಗದಿಯಾಗಿದೆ. ಪೂಜಾರಿಯೇ ಸಿಗಲಿಲ್ಲ. ಪೂಜೆ ಮಾಡುವಂತೆ ದಾರಿಯಲ್ಲಿ ಸಿಕ್ಕ ಪೂಜಾರಿಯನ್ನೇ ಕೇಳಿದ್ದಾರೆ. ಆದರೆ ಆತ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಸನ್ನತಿ ನಂಬರ್ ಸಂಘದ ಸದಸ್ಯರು ದರದರನೆ ಎಳೆದುಕೊಂಡು ಬಂದು ಮನೆಯಲ್ಲಿ ಕೂರಿಸಿ ಪೂಜೆ ಮಾಡಿಸಿದ್ದಾರೆ.
ಕೋಲ್ಕತ್ತಾದ ಬೆಹಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಎಲ್ಲ ಸಿದ್ಧತೆಗಳು ಆಗಿದ್ದು ಬಂದು ಪೂಜೆ ಮಾಡಿದರೆ ಸಾಕು ಎಂದು ಕೇಳಿದ್ದಾರೆ. ಕೊನೆಗೆ ದೇವರ ಮನೆ ಬಳಿ ಬಿಟ್ಟು ಬಾಗಿಲನ್ನು ಹಾಕಿದ್ದಾರೆ. ಅಲ್ಲಿ ಕೆಲವು ಸಿದ್ಧತೆಗಳು ಕಾಣದ್ದರಿಂದ ಪೂಜಾರಿ ಸಹ ಸಿಡಿಮಿಡಿಗೊಂಡಿದ್ದಾರೆ.
ಪೂಜಾರಿಯನ್ನೇ ಎಳೆದೊಯ್ದು ಪೂಜೆ ಮಾಡಿಸಿದರು!
Follow Us