newsics.com
ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜತೆ ನಂಟು ಹೊಂದಿರುವ ಶಂಕಿತ ಡ್ರಗ್ಸ್ ಪೆಡ್ಲರ್ ನನ್ನು ಎನ್ ಸಿ ಬಿ ಬಂಧಿಸಿದೆ.
ಸಾಂತಕ್ರೂಜ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಎನ್ ಸಿ ಬಿ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಶಂಕಿತ ಡ್ರಗ್ಸ್ ಪೆಡ್ಲರ್ ನನ್ನು ಇದೀಗ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಆರ್ಯನ್ ಖಾನ್ ಡ್ರಗ್ಸ್ ಪೆಡ್ಲರ್ ಜತೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು.