ಅಹ್ಮದಾಬಾದ್: ದಕ್ಷಿಣ ಗುಜರಾತ್ನ ಹಲವು ಭಾಗಗಳಲ್ಲಿ ಸೋಮವಾರ 3.3 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹ್ಮದಾಬಾದ್’ನಿಂದ 200 ಕಿ.ಮೀ. ದೂರದ ಭರೂಚಾ ಜಿಲ್ಲೆಯಲ್ಲಿ ಭೂಕಂಪ ಕೇಂದ್ರ ಬಿಂದು ಹೊಂದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭರೂಚಾ ನಗರದ ಆಗ್ನೇಯದಲ್ಲಿ 7 ಕಿಲೋ ಮೀಟರ್ ದೂರದಲ್ಲಿ 3.3 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಗಾಂಧಿ ನಗರದ ಭೂಕಂಪಶಾಸ್ತ್ರ ಸಂಶೋಧನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸಂಜೆ 5.19ಕ್ಕೆ ಭೂಕಂಪ ಸಂಭವಿಸಿತು. ಭೂಕಂಪದ ಅನುಭವವಾದ ಕೂಡಲೇ ಜನರು ಭೀತಿಯಿಂದ ತಮ್ಮ ಮನೆಯಿಂದ ಹೊರಗೋಡಿ ಬಂದರು ಎಂದು ಭರೂಚಾದ ಜಿಲ್ಲಾಧಿಕಾರಿ ಎಂ. ಮೋಡಿಯಾ ತಿಳಿಸಿದ್ದಾರೆ.
ಭರೂಚಾದಲ್ಲಿ ಭೂಕಂಪ
Follow Us