Wednesday, October 5, 2022

ದೇಶದ ಆರ್ಥಿಕತೆಯಲ್ಲಿ ಉತ್ತಮ ಚೇತರಿಕೆ; ವಿತ್ತ ಸಚಿವೆ

Follow Us

NEWSICS.COM

ನವದೆಹಲಿ: ನಿನ್ನೆ (ನ.11) ಪಿ ಎಲ್ ಐ ಯೋಜನೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ಇಂದು (ನ.12) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಕರೆದಿದ್ದರು. ದೇಶದ ಆರ್ಥಿಕತೆಯ ಕುರಿತು ಮಾತನಾಡಿದ ಅವರು,
ದೀರ್ಘವಾದ ಹಾಗೂ ಕಟ್ಟುನಿಟ್ಟಾದ ಲಾಕ್ ಡೌನ್ ನಂತರ ಭಾರತದ ಆರ್ಥಿಕತೆಯು ಉತ್ತಮ ಚೇತರಿಕೆಗ ಕಂಡಿದೆ ಎಂದಿದ್ದಾರೆ.

ಕಾಂಪೋಸಿಟ್ ಕೊಳ್ಳುವಿಕೆ ವ್ಯವಸ್ಥಾಪಕರ ಸೂಚ್ಯಂಕವು (ಪಿಎಂಐ) ಹಿಂದಿನ ತಿಂಗಳಲ್ಲಿ ಶೇ 54.6ರಷ್ಟಿತ್ತು ಅ.ನಲ್ಲಿ ಶೇ 58.9 ಕ್ಕೆ ಏರಿಕೆಯಾಗಿದೆ. ಒಂಬತ್ತು ವರ್ಷಗಳಲ್ಲಿ ಉತ್ಪಾದನೆಯಲ್ಲಿ ಪ್ರಬಲ ಏರಿಕೆ ದಾಖಲಿಸಿದೆ. ಜಿ ಎಸ್ ಟಿ ಕೂಡ ಶೇ.10ರಷ್ಟು ಏರಿಕೆ ಕಂಡಿದೆ . ದೈನಂದಿನ ರೈಲ್ವೆ ಸರಕು ಸಾಗಣೆ ವರ್ಷದಿಂದ ವರ್ಷಕ್ಕೆ ಸರಾಸರಿ ಶೇಕಡಾ 20 ರಷ್ಟು ಏರಿಕೆಯಾಗಿದೆ. ಆರ್ ಬಿ ಐ ಪ್ರಕಾರ 2020-21ನೇ ಕ್ಯೂ3ರಲ್ಲಿ ಆರ್ಥಿಕತೆಯು ಸಕಾರಾತ್ಮಕ ಬೆಳವಣಿಗೆಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಶಾಲೆ ಆರಂಭ ಮತ್ತೆ ಮುಂದೂಡಿಕೆ

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!