Tuesday, July 5, 2022

ನಡುರಸ್ತೆಯಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು: ಬಳಕೆದಾರರಿಗೆ ಆತಂಕ

Follow Us

newsics.com

ಮುಂಬೈ: ದೇಶದಲ್ಲಿ ಇದೇ‌ ಮೊದಲ‌ ಬಾರಿ ಎಲೆಕ್ಟ್ರಿಕ್ ಕಾರೊಂದು ಹೊತ್ತಿ ಉರಿದಿದೆ.
ಮುಂಬೈನ ವಸೈ ವೆಸ್ಟ್‌ನಲ್ಲಿ ನೆಕ್ಸಾನ್‌ ಇವಿ ಕಾರು ಬೆಂಕಿಗೆ ಆಹುತಿಯಾಗಿದೆ. ಟಾಟಾ ನೆಕ್ಸಾನ್‌ ಇವಿ ಕಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾರು ಹಾಗೂ ಬಳಕೆದಾರರ ಸುರಕ್ಷತೆ ಕಾಪಾಡುವಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿರುವ ಸಂಸ್ಥೆ, ಸಂಪೂರ್ಣ ತನಿಖೆ ಬಳಿಕ ಘಟನೆಗೆ ಮತ್ತಷ್ಟು ವಿವರ ನೀಡುವುದಾಗಿ ತಿಳಿಸಿದೆ.

ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರಿನ ಮಾಲೀಕ ತನ್ನ ಕಚೇರಿಯಲ್ಲಿ ಹಾಕಿದ್ದ ಸ್ಲೋ ಚಾರ್ಜರ್‌ ಮೂಲಕವೇ ಕಾರನ್ನು ಚಾರ್ಜ್‌ ಮಾಡಿದ್ದ. ಕೆಲಸ ಮುಗಿಸಿ ಸಂಜೆ ಕಚೇರಿಯಿಂದ ಹೊರಟಿದ್ದು, ಸುಮಾರು 5 ಕಿಮೀ ದೂರ ಸಾಗುವಷ್ಟರಲ್ಲಿ ವಾರ್ನಿಂಗ್‌ ಬರಲು ಶುರುವಾಗಿದೆ. ಡ್ಯಾಶ್‌ ಬೋರ್ಡ್‌ ಮೂಲಕ ಬೆಂಕಿ ಕಿಡಿ ಕಾಣಿಸಿಕೊಂಡಿತ್ತು. ಕೂಡಲೇ ಅಲರ್ಟ್‌ ಆದ ಆತ ಕಾರಿನಿಂದ ಕೆಳಕ್ಕಿಳಿದಿದ್ದಾನೆ. ಕ್ಷಣಮಾತ್ರದಲ್ಲಿ ಕಾರು ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಬಳಿಕ ಬೆಂಕಿ ಆರಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರುಗಳು ದೇಶದಲ್ಲಿವೆ. ಸುಮಾರು 30 ಸಾವಿರ ವಾಹನಗಳು ಈಗಾಗಲೇ ಮಾರಾಟವಾಗಿವೆ ಎಂದು ಕಂಪನಿ ಹೇಳಿದೆ.

ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು. ಪ್ರತಿ ತಿಂಗಳು ಕನಿಷ್ಠ 2,500-3,000 ಕಾರುಗಳು ಮಾರಾಟವಾಗುತ್ತಿವೆ.

ಬಹುನಿರೀಕ್ಷಿತ ವಿಕ್ರಾಂತ್​ ರೋಣ ಟ್ರೈಲರ್​ ರಿಲೀಸ್​ : ದ್ವಿಪಾತ್ರದಲ್ಲಿ ಸುದೀಪ್​ ಅಭಿನಯ?

ಬಾಡಿಗೆ ತಾಯಿಗೆ ಮೂರು ವರ್ಷಗಳ ಆರೋಗ್ಯ ವಿಮೆ ಕಡ್ಡಾಯ : ಕೇಂದ್ರ

ಮುಳುಗಿದ ಹಾಂಕ್​​ಕಾಂಗ್​​ನ ಪ್ರಸಿದ್ಧ ತೇಲುವ ರೆಸ್ಟಾರೆಂಟ್​

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!