Tuesday, March 2, 2021

ವಿದ್ಯುತ್ ಬೇಲಿ ಸ್ಪರ್ಶ; ಎರಡು ಹೆಣ್ಣಾನೆ ಸಾವು

newsics.com
ದಿಸ್ಪುರ(ಅಸ್ಸಾಂ): ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿ ಸ್ಪರ್ಶದಿಂದ ಎರಡು ಹೆಣ್ಣಾನೆಗಳು ಸಾವನ್ನಪ್ಪಿದ ಘಟನೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ದರಿಯಾಲಿ ಗ್ರಾಮಸ್ಥರು ಬೆಳೆಗಳ ರಕ್ಷಣೆಗಾಗಿ ತಮ್ಮ ಜಮೀನುಗಳಿಗೆ ವಿದ್ಯುತ್ ಬೇಲಿ ಅಳವಡಿಸಿದ್ದರು. ಆಹಾರ ಹುಡುಕುತ್ತ ಬಂದಿರುವ ಈ ಆನೆಗಳಿಗೆ ವಿದ್ಯುದಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿವೆ. ಆನೆಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ ಅಥವಾ ಯಾರಾದರೂ ಹತ್ಯೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವಂಚನೆ ಕಂಡುಬಂದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಸಾಗರ್ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಚಂಪಕ್ ದೇಕಾ ತಿಳಿಸಿದ್ದಾರೆ. ಘಟನೆ ನಡೆದ ಪ್ರದೇಶವು ಪಾನಿ ಡಿಹಿಂಗ್ ಪಕ್ಷಿಧಾಮಕ್ಕೆ ಸೇರಿದ್ದಾಗಿದೆ. ಆದರೂ ಕೆಲ ಸ್ಥಳೀಯರು ಅಕ್ರಮವಾಗಿ ಕೃಷಿ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಹೆಪ್ಪುಗಟ್ಟಿದ ಕೊಳದಿಂದ ಜಿಂಕೆಯ ರಕ್ಷಣೆ…

ಮಾರ್ಚ್-ಮೇನಲ್ಲೇ ಕರ್ನಾಟಕ ಸೇರಿ ದೇಶವನ್ನು ರೂಪಾಂತರಿ ಕೊರೋನಾ ಕಾಡಿತ್ತು…

ಅಟಲ್ ಟನಲ್’ನಲ್ಲಿ ಡಾನ್ಸ್; ಸಂಚಾರಕ್ಕೆ ಅಡ್ಡಿ, 10 ಪ್ರವಾಸಿಗರ ಬಂಧನ

ಮತ್ತಷ್ಟು ಸುದ್ದಿಗಳು

Latest News

ಖಾಕಿ ಬಟ್ಟೆ ಧರಿಸಲು ಸಜ್ಜಾಗುತ್ತಿದ್ದಾರೆ 15 ಮಂಗಳಮುಖಿಯರು!

newsics.comರಾಯ್'ಪುರ(ಛತ್ತೀಸ್ಗಢ): 15 ತೃತೀಯ ಲಿಂಗಿಗಳು  ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.ದೈಹಿಕ ಪರೀಕ್ಷೆಯ ಫಲಿತಾಂಶ ಇಂದು(ಮಾ.1)...

ಗೃಹಸಾಲದ ಮೇಲಿನ ಆರಂಭಿಕ ಬಡ್ಡಿದರ ಇಳಿಸಿದ ಎಸ್’ಬಿಐ

newsics.comನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಶೇ. 6.70ಕ್ಕೆ ಇಳಿಕೆಯಾಗಿದೆ.75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು,...

ಕೊರೋನಾ ಲಸಿಕೆ ಪಡೆದ ಇನ್ಫೋಸಿಸ್ ಮೂರ್ತಿ ದಂಪತಿ

newsics.comಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನ್ ಸೋಮವಾರ ಆರಂಭವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು.ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು...
- Advertisement -
error: Content is protected !!