newsics.com
ಶ್ರೀನಗರ: ಜಮ್ಮು ಕಾಶ್ಮೀರದ ಕಿಲ್ಬಾಲ್ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಲಾಗಿದ್ದು, ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ.
ಶೋಪಿಯಾನ್ ಜಿಲ್ಲೆಯ ಕಿಲ್ ಬಾಲ್ನಲ್ಲಿ ಈ ಎನ್ಕೌಂಟರ್ ನಡೆದಿದ್ದು, ಉಗ್ರರು ಮತ್ತು ಸೇನೆಯ ಮಧ್ಯೆ ಗುಂಡಿನ ಚಕಮಕಿ ಮುಂದುವರೆದಿದೆ. ಘಟನಾ ಸ್ಥಳದ ಸುತ್ತ ಯೋಧರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಜನವರಿ ಆರಂಭದಲ್ಲಿ ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಎನ್ ಕೌಂಟರ್ಗಳಲ್ಲಿ ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಉನ್ನತ ಕಮಾಂಡರ್ ಸಲೀಂ ಪರ್ರೆ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದರು.
ರಾಜ್ಯದಲ್ಲಿ 42,470 ಮಂದಿಗೆ ಕೊರೋನಾ, 35,140 ಸೋಂಕಿತರು ಗುಣಮುಖ, 26 ಜನ ಸಾವು
ಕಿವಿಯಲ್ಲಿ ನೋವು, ಶಿಳ್ಳೆ ಸದ್ದು, ಝುಮ್ ಅನುಭವ- ಒಮೈಕ್ರಾನ್ ಸೋಂಕಿನ ಲಕ್ಷಣ