Monday, April 12, 2021

ಲಾಕ್’ಡೌನ್’ನಲ್ಲೂ ಲಕ್ಷ ಲಕ್ಷ ಆದಾಯ ಗಳಿಸಿದ ಎಥಿಕಲ್ ಹ್ಯಾಕರ್

ಕಾನ್ಪುರ:  ಮೂರು ತಿಂಗಳ ಕಾಲದ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನವರು ಆದಾಯ ವಂಚಿತರಾಗಿದ್ದರು. ಜೀವನ ನಡೆಸುವುದೇ ಮುಖ್ಯ ಸವಾಲಾಗಿತ್ತು. ಈ ಸಂದರ್ಭದಲ್ಲಿ ಕಾನ್ಪುರದ ಎಥಿಕಲ್ ಹ್ಯಾಕರ್ ಒಬ್ಬರು ಮನೆಯಲ್ಲೇ ಕುಳಿತು ಲಕ್ಷ ಲಕ್ಷ ರೂಪಾಯಿ ಗಳಿಸಿದ್ದಾರೆ.  ಸೈಬರ್ ಸೆಕ್ಯೂರಿಟಿ ಸಂಶೋಧಕ ಮತ್ತು ಎಥಿಕಲ್ ಹ್ಯಾಕರ್ ಆಗಿರುವ ರಾಹುಲ್ ಸಿಂಗ್ ಈ ಸಾಧನೆ ಮಾಡಿದ್ದಾರೆ. ಗೂಗಲ್ ಉತ್ಪನ್ನಗಳ ದೋಷ ಗುರುತಿಸಿ 3.78 ಲಕ್ಷ ರೂಪಾಯಿ ಗಿಟ್ಟಿಸಿಕೊಂಡಿದ್ದಾರೆ. 2010ರಿಂದ ಆರಂಭಿಸಿ ತನ್ನ ಉತ್ಪನ್ನಗಳಲ್ಲಿರುವ ದೋಷ ಪತ್ತೆ ಹಚ್ಚಿದರೆ ಬಹುಮಾನ ನೀಡುವ ಪದ್ಧತಿಯನ್ನು ಗೂಗಲ್ ರೂಢಿಸಿಕೊಂಡಿದೆ. ಇದಕ್ಕೆ ಬಗ್ ಬೌಂಟಿ ಎಂದು ಹೆಸರಿಡಲಾಗಿದೆ. ರಾಹುಲ್ ಸಿಂಗ್ ಗೂಗಲ್ ಉತ್ಪನ್ನಗಳ ಮೂರು ದೋಷಗಳನ್ನು ಪತ್ತೆ ಹಚ್ಚಿದ್ದರು. ರಾಹುಲ್ ಸಿಂಗ್ ಈ ಹಿಂದೆ ಕಾನ್ಪುರ ವಿಶ್ವ ವಿದ್ಯಾಲಯದ ಕೆಲವು ತಾಂತ್ರಿಕ ಲೋಷದೋಷಗಳನ್ನು ಕೂಡ ಬಹಿರಂಗಪಡಿಸಿದ್ದರು

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!