ನವದೆಹಲಿ: ಚೀನಾದ ಕೊರೋನಾ ವೈರಾಣು ಸೋಂಕು ಪೀಡಿತ ವುಹಾನ್ ನಗರದಿಂದ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಸ್ವದೇಶಕ್ಕೆ ಕರೆತರುವುದು ತಮ್ಮ ಬದುಕಿನ ಅತ್ಯಂತ ದೊಡ್ಡ ಸವಾಲಾಗಿತ್ತು ಎಂದು ಏರ್ ಇಂಡಿಯಾ ಹಿರಿಯ ಅಧಿಕಾರಿ ಕ್ಯಾಪ್ಟನ್ ಅಮಿತಾಬ್ ಸಿಂಗ್ ತಿಳಿಸಿದ್ದಾರೆ.
ಚೀನಾದಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ದೆಹಲಿ ವಿಮಾನನಿಲ್ದಾಣಕ್ಕೆ ಕರೆತಂದ ತಂಡದ ನೇತೃತ್ವ ವಹಿಸಿದ್ದ ಅವರು, 324 ಜನರನ್ನು ಸುಮಾರು ಏಳು ಗಂಟೆಗಳ ಕಾಲ ತಪಾಸಣೆ ಹಾಗೂ ದಾಖಲೆಗಳ ಪರಿಶೀಲನೆಗೊಳಪಡಿಸಲಾಯಿತು. ಅವರು ವಿಮಾನ ನಿಲ್ದಾಣದ ಸುತ್ತಮುತ್ತ ಯಾರೊಂದಿಗೂ ಸಂಪರ್ಕ ಹೊಂದದಂತೆ ಎಚ್ಚರವಹಿಸಲಾಗಿತ್ತು ಎಂದಿದ್ದಾರೆ.
ವಿಶ್ವದ ಬಹುತೇಕ ಎಲ್ಲಾ ದೇಶಗಳು ಚೀನಾಕ್ಕೆ ವಿಮಾನಯಾನವನ್ನು ರದ್ದುಗೊಳಿಸಿರುವುದರಿಂದ ವಿಮಾನನಿಲ್ದಾಣದ ಮೂಲಕ ಅವರನ್ನು ಕರೆತರುವುದು ಸುಲಭವಾಯಿತು ಎಂದು ಅಮಿತಾಬ್ ವಿವರಿಸಿದ್ದಾರೆ.