ನವದೆಹಲಿ: ಶಸ್ತ್ರಚಿಕಿತ್ಸೆ ವೇಳೆ ಬಳಸುವ ಮಾಸ್ಕ್ (ಮುಖಗವಚ) ಹಾಗೂ ಕೈಗವಸು(ಗ್ಲೋವ್)ಗಳಿಗೆ ರಫ್ತು ನಿಷೇಧ ಪಟ್ಟಿಯಿಂದ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಶಸ್ತ್ರಚಿಕಿತ್ಸೆ ಮಾಸ್ಕ್, ಬಳಸಿ ಬಿಸಾಡುವ ಮಾಸ್ಕ್ ಹಾಗೂ ಕೈಗವಸುಗಳ (ಎನ್ಬಿಆರ್ ಕೈಗವಸುಗಳನ್ನು ಹೊರತುಪಡಿಸಿ) ರಫ್ತಿಗೆ ವಿಧಿಸಲಾಗಿರುವ ನಿಷೇಧ ತೆರವಾಗಿದೆ. ಆದರೆ ಮುಖಗವಚ, ಕೈಗವಚದ ಜತೆ ಎನ್-95 ಮತ್ತು ಇತರ ಸಾಧನಗಳ ರಫ್ತು ನಿಷೇಧ ಮುಂದುವರಿಯುತ್ತದೆ ಎಂದು ವಿದೇಶಾಂಗ ವ್ಯವಹಾರದ ಪ್ರಧಾನ ನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.
ರಫ್ತು ನಿಷೇಧ ಪಟ್ಟಿಯಿಂದ ಮಾಸ್ಕ್, ಗ್ಲೋವ್ ಗೆ ವಿನಾಯಿತಿ
Follow Us