Sunday, November 1, 2020

ವಿದೇಶಿಗರ ವೀಸಾ ಅಮಾನತು ಅವಧಿ ವಿಸ್ತರಣೆ

ನವದೆಹಲಿ: ವಿದೇಶಿಗರಿಗೆ ನೀಡಿರುವ ಎಲ್ಲ ಬಗೆಯ ವೀಸಾಗಳ ಅಮಾನತು ಅವಧಿಯನ್ನು ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದೆ.
ಆದರೆ ಈ ಅಮಾನತು ರಾಜತಾಂತ್ರಿಕರು, ಅಧಿಕಾರಿಗಳು, ವಿಶ್ವಸಂಸ್ಥೆ ಅಥವಾ ಇತರ ಅಂತರಾಷ್ಟ್ರೀಯ ಪ್ರತಿನಿಧಿಗಳ ವೀಸಾಗಳಿಗೆ ಅನ್ವಯವಾಗುವುದಿಲ್ಲ. ಕೊರೋನಾ ನಿಯಂತ್ರಣಕ್ಕಾಗಿ ವಿಮಾನ ಪ್ರಯಾಣಕ್ಕೆ ಭಾರತ ಸರ್ಕಾರ ವಿಧಿಸಿರುವ ನಿರ್ಬಂಧ ತೆರವುಗೊಳಿಸುವವರೆಗೆ ವೀಸಾಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ, ಭಾರತದಲ್ಲಿ ಸಿಲುಕಿರುವ ವಿದೇಶಿಯರ ವೀಸಾ ಅವಧಿಯನ್ನು ಶುಲ್ಕರಹಿತವಾಗಿ ವಿಸ್ತರಣೆ ಮಾಡುವುದಾಗಿ ಗೃಹ ಸಚಿವಾಲಯ ತಿಳಿಸಿದೆ. ಈ ವಿಸ್ತರಣೆ ಅಂತರಾಷ್ಟ್ರಿಯ ವಿಮಾನ ಪ್ರಯಾಣ ಆರಂಭಗೊಂಡ ನಂತರದ 30 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ.

ಮತ್ತಷ್ಟು ಸುದ್ದಿಗಳು

Latest News

ರಸ್ತೆಯಲ್ಲೇ ಪತ್ನಿಯ ಕತ್ತು ಸೀಳಿ ಹತ್ಯೆ

newsics.comಹಾಸನ: ರಸ್ತೆಯಲ್ಲಿ ಶನಿವಾರ ನಡೆದ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ರಸ್ತೆ ಎನ್ನುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ...

RCB ವಿರುದ್ಧ ಗೆದ್ದು ಬೀಗಿದ ಹೈದರಾಬಾದ್

newsics.comಶಾರ್ಜಾ: ಇಲ್ಲಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 2020 ಆವೃತ್ತಿಯ 51ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಭರ್ಜರಿ ಗೆಲುವು ದಾಖಲಿಸಿದೆ.ಪಂದ್ಯದಲ್ಲಿ ಆರ್‌ಸಿಬಿ...

ಬಿಎಸ್‌ಪಿ ಟಿಕೆಟ್ ಪಡೆಯುವಲ್ಲಿ ವಿಫಲ; ವ್ಯಾಪಾರಿ ಆತ್ಮಹತ್ಯೆ

newsics.comಲಖನೌ: ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾದ ಬಿಎಸ್ಪಿ ಮುಖಂಡ, ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರ ಮಾಹಿತಿಯಂತೆ, ಮೃತ ವ್ಯಕ್ತಿಯ ಬಳಿ ಡೆತ್‍ ನೋಟ್‍ ಪತ್ತೆಯಾಗಿದೆ. ಟಿಕೆಟ್‌ಗಾಗಿ...
- Advertisement -
- Advertisement -
error: Content is protected !!