Tuesday, April 13, 2021

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ

ನವದೆಹಲಿ: ಸಂಬಳರಹಿತ ಆದಾಯ ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಯನ್ನು ಈಗಿರುವ ದರಗಳಲ್ಲಿ ಶೇ 25 ರಷ್ಟು ಕಡಿಮೆಗೊಳಿಸುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ.
ಮೇ 14ರಿಂದ ಮಾರ್ಚ್ 31ರವರೆಗೆ ಟಿಡಿಎಸ್ ಮತ್ತು ಟಿಸಿಎಸ್ ದರವನ್ನು ಅಸ್ತಿತ್ವದಲ್ಲಿರುವ ದರದ ಶೇ.25ರಷ್ಟು ಕಡಿಮೆ ಮಾಡಲಾಗಿದೆ. ಇದು ಎಲ್ಲ ಪಾವತಿಗಳಿಗೆ ಅನ್ವಯಿಸುತ್ತದೆ ಎಂದರು.
ಅಲ್ಲದೆ, 2019-20ನೇ ಸಾಲಿನ ಎಲ್ಲ ಆದಾಯ ತೆರಿಗೆ ರಿಟರ್ನ್‌ಗಳ ದಿನಾಂಕವನ್ನು 2020 ಜುಲೈ 31 ಮತ್ತು 2020 ರ ಅಕ್ಟೋಬರ್ 31 ರಿಂದ 2020 ರ ನವೆಂಬರ್ 30 ರವರೆಗೆ ವಿಸ್ತರಿಸಿದೆ. ತೆರಿಗೆ ಲೆಕ್ಕಪರಿಶೋಧನೆಯ ದಿನಾಂಕವನ್ನು ಸೆಪ್ಟೆಂಬರ್ 30, 2020 ರಿಂದ 31 ಅಕ್ಟೋಬರ್ 2020 ಕ್ಕೆ ನಿಗದಿಪಡಿಸಿದೆ.
ಮೂರು ತಿಂಗಳು ಎಟಿಎಂಗಳಲ್ಲಿ ಹಣ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು, ವ್ಯಾಪಾರ ಮತ್ತು ಕಾರ್ಮಿಕರಿಗೆ ಇಪಿಎಫ್ ಬೆಂಬಲವನ್ನು ಇನ್ನೂ 3 ತಿಂಗಳು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಪಿಎಂ ಗರಿಬ್ ಕಲ್ಯಾಣ್ ಪ್ಯಾಕೇಜ್ ಮತ್ತು ಅದರ ವಿಸ್ತರಣೆಯಡಿ ಶೇಕಡಾ 24 ರಷ್ಟು ಇಪಿಎಫ್ ಬೆಂಬಲಕ್ಕೆ ಅರ್ಹತೆ ಇಲ್ಲದ ಕಾರ್ಮಿಕರಿಗೆ ಈ ಯೋಜನೆ ಅನ್ವಯವಾಗುತ್ತದೆ. ಇದು ಸುಮಾರು 6.5 ಲಕ್ಷ ಸಂಸ್ಥೆಗಳು ಮತ್ತು ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ 4.3 ಕೋಟಿ ಉದ್ಯೋಗಿಗಳಿಗೆ ನೆರವಾಗಲಿದೆ. ಹೀಗಾಗಿ ಪಿಎಫ್ ಹಣವನ್ನೂ ಸೇರಿಸಿ ಸಂಬಳ ಪಡೆಯಬಹುದಾಗಿದೆ ಎಂದು ಸೀತಾರಾಮನ್ ಹೇಳಿದರು.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!