Newsics.com
ಪಣಜಿ: ವಿವಾದಗಳಿಗೂ ನಟಿ ಪೂನಂ ಪಾಂಡೆಗೂ ಹತ್ತಿರದ ನಂಟು, ಇದೀಗ ಹೊಸ ಪ್ರಕರಣವೊಂದರಲ್ಲಿ ಪೂನಂ ವಿರುದ್ಧ ಗೋವಾದಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಗೋವಾದ ಚಪೋಲಿ ಅಣೆಕಟ್ಟು ಪ್ರದೇಶದಲ್ಲಿ ಅಶ್ಲೀಲ ವಿಡೀಯೊ ಚಿತ್ರೀಕರಣ ಮಾಡಿದ್ದಾರೆ ಎಂಬ ಆರೋಪಕ್ಕೆ ಪೂನಂ ಗುರಿಯಾಗಿದ್ದಾರೆ.
ಪೂನಂ ಪಾಂಡೆ ಕೃತ್ಯದಿಂದ ಗೋವಾದ ಹೆಣ್ಮಕ್ಕಳು ತಲೆತಗ್ಗಿಸುವಂತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತುಂಡು ಉಡುಗೆ ಧರಿಸಿ ಮಾದಕ ಭಂಗಿಯಲ್ಲಿ ಫೋಸ್ ನೀಡುವ ದೃಶ್ಯವನ್ನು ಪೂನಂ ಪಾಂಡೆ ಗೋವಾದಲ್ಲಿ ಚಿತ್ರೀಕರಿಸಿದ್ದರು.
ಇದೇ ಸಂದರ್ಭದಲ್ಲಿ ಪೂನಂ ಪಾಂಡೆ ಮತ್ತು ಅವರ ಪತಿ ಸ್ಯಾಮ್ ಬೊಂಬೆ ಮಧ್ಯೆ ಭಿನ್ನಾಭಿಪ್ರಾಯ ಕೂಡ ತಲೆದೋರಿತ್ತು. ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೂನಂ ಪಾಂಡೆ ಗಂಡನ ವಿರುದ್ಧ ದೂರು ಕೂಡ ನೀಡಿದ್ದರು.
ಬಳಿಕ ಈ ದೂರು ಹಿಂತೆಗೆದುಕೊಂಡಿದ್ದರು. ಎಲ್ಲ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ ಎಂಬ ಸಮಜಾಯಿಷಿ ನೀಡಿದ್ದರು.