Monday, January 18, 2021

ಭಾರತಕ್ಕೆ ಹರಿದು ಬರುತ್ತಿದೆ ನಕಲಿ ಕರೆನ್ಸಿ: ದಾವೂದ್ ಇಬ್ರಾಹಿಂ ಸೂತ್ರಧಾರ ಎಂದ ಈಜಾಜ್ ಲಕಡ್ ವಾಲ್

ಮುಂಬೈ:  ಪೊಲೀಸರ  ವಶದಲ್ಲಿರುವ ಗ್ಯಾಂಗ್ ಸ್ಟರ್ ಈಜಾಜ್ ಲಕಡ್ ವಾಲ್  ವಿಚಾರಣೆ ಸಂದರ್ಭದಲ್ಲಿ ಹಲವು ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇಪಾಳದಲ್ಲಿ ಉತ್ತಮ ನೆಲೆ ಹೊಂದಿದ್ದಾನೆ. ಈ ಬೆಂಬಲದೊಂದಿಗೆ ಆತ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಮುಖ್ಯವಾಗಿ ನೇಪಾಳ ಗಡಿಯ ಮೂಲಕ ಭಾರತದ ನಕಲಿ ಕರೆನ್ಸಿ ನೋಟುಗಳನ್ನು ದೇಶಕ್ಕೆ ಸಾಗಿಸುತ್ತಿದ್ದಾನೆ. ಕಾಠ್ಮಂಡುವಿನಲ್ಲಿರುವ ಪಾಕ್ ರಾಯಭಾರಿ ಕಚೇರಿಯ ಕೆಲವು ಅಧಿಕಾರಿಗಳು ಇದಕ್ಕೆ ಆತನಿಗೆ ಸಾಥ್ ನೀಡುತ್ತಿದ್ದಾರೆ ಎಂದು ಲಕಡ್ ವಾಲ ಆರೋಪಿಸಿದ್ದಾನೆ. ಪಾಕಿಸ್ತಾನದಲ್ಲಿ ದಾವೂದ್ ಇಬ್ರಾಹಿಂ ವಾಸ್ತವ್ಯ ಹೂಡುತ್ತಿರುವ ಪ್ರಮುಖ ಮೂರು ಮನೆಗಳ ವಿಳಾಸಗಳನ್ನು  ಕೂಡ ಲಕಡ್ ವಾಲ್ ವಿಚಾರಣೆ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾನೆ ಎಂದು ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಅಜೀಂ ಪ್ರೇಮ್ ಜಿ, ದೇವಿ ಪ್ರಸಾದ್ ಶೆಟ್ಟಿ, ಸುದೀಪ್’ಗೆ ಪ್ರೆಸ್ ಕ್ಲಬ್ ಪ್ರಶಸ್ತಿ

newsics.com ಬೆಂಗಳೂರು: 2020ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಬಿಡುಗಡೆ ಮಾಡಿದೆ. ಈ ಬಾರಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ...

ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ವೇಳೆ ಅಪಘಾತ: ವಧು ಸೇರಿ ಮೂವರು ಸಾವು

newsics.com ರಾಯಚೂರು: ಸ್ನೇಹಿತರಿಗೆ ಮದುವೆ ಆಮಂತ್ರಣ ಕೊಟ್ಟು ವಾಪಸ್ಸಾಗುವಾಗ ಅಪಘಾತದಲ್ಲಿ ವಧು ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ. ರಾಯಚೂರಿನಲ್ಲಿ ಮಸ್ಕಿ ಪಟ್ಟಣದ ಬಳಿ ಅಪಘಾತ ನಡೆದಿದೆ. ಮೃತರನ್ನು ಚಿತ್ರನಾಳ ಗ್ರಾಮದ ವೀರೇಶ (23), ಅಡವಿಭಾವಿ ಗ್ರಾಮದ...

ಏರಿಕೆಕಂಡ ಚಿನ್ನ, ಬೆಳ್ಳಿ ಬೆಲೆ!

newsics.com ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಮತ್ತೆ ಏರಿಕೆಯತ್ತ ಮುಖಮಾಡಿದ್ದು, 117 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ 10 ಗ್ರಾಮ್​ಗೆ 48,332 ರೂಪಾಯಿಗೆ ತಲುಪಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯೂರಿಟೀಸ್ ಮಾಹಿತಿ ನೀಡಿದೆ. ಬೆಳ್ಳಿಯ ಬೆಲೆಯಲ್ಲಿಯೂ...
- Advertisement -
error: Content is protected !!