newsics.com
ತಿರುವನಂತಪುರಂ: ಖ್ಯಾತ ಮಲೆಯಾಳಂ ಸಿನೆಮಾ ನಟ ನಡುಮುಡಿ ವೇಣು(73) ಇನ್ನಿಲ್ಲ. ತಿರುವನಂತಪುರಂ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.
ಕೊರೋನಾ ಸೋಂಕಿಗೆ ತುತ್ತಾಗಿದ್ದ ನಡುಮುಡಿ ವೇಣು ಬಳಿಕ ಚೇತರಿಸಿಕೊಂಡಿದ್ದರು. ಕೇಶವನ್ ವೇಣು ಎಂಬ ಹೆಸರಿದ್ದರೂ ಅವರು ನಡುಮುಡಿ ವೇಣು ಎಂದೇ ಪ್ರಸಿದ್ಧಿಪಡೆದಿದ್ದರು.
500ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಲಾತ್ಮಕ ಮತ್ತು ವಾಣಿಜ್ಯ ಸಿನೆಮಾಗಳಲ್ಲಿ ಸೈ ಎನಿಸಿಕೊಂಡಿದ್ದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳಿಂದ ನಡುಮುಡಿ ವೇಣು ಪುರಸ್ಕೃತರಾಗಿದ್ದರು.