newsics.com
ನವದೆಹಲಿ: ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಅವರು ಮುಂಬೈನ ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾದರು. ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಳೆದ ವಾರಾಂತ್ಯದಲ್ಲಿ ನಟಿ ಆಶಾಲತಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಟೆಲಿವಿಷನ್ ಸೀರಿಯಲ್ ನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಕೋವಿಡ್ 19 ಸೋಂಕು ತಗುಲಿತ್ತು ಎಂದು ಹೇಳಲಾಗಿದೆ. ನಟಿ ರೇಣುಕಾ ಶಾಹಾನೆ ಮರಾಠಿಯಲ್ಲಿ ಟ್ವೀಟ್ ಮಾಡಿ, ನಟಿ ಆಶಾಲತಾ ಅವರಿಗೆ ಸಂತಾಪ ಸೂಚಿಸಿದ್ದಾರೆ. ಗೋವಾದಲ್ಲಿ ಜನಿಸಿದ್ದ ಆಶಾಲತಾ ಅವರ ಸುಂದರವಾದ ಜೀವವನ್ನು ಕೊರೋನಾ ಕಸಿದುಕೊಂಡುಬಿಟ್ಟಿದೆ. ತುಂಬಾ ಸ್ನೇಹಪರ, ಸೂಕ್ಷ್ಮ ಹಾಗೂ ದೊಡ್ಡ ನಟಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.
ಮಾದಕ ದ್ರವ್ಯದ ಕಂಪನ: ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್ ಸಿ ಬಿ ನೋಟಿಸ್
ನವೆಂಬರ್ 1ರಿಂದ ಪದವಿ ಕಾಲೇಜು ಆರಂಭ- ಯುಜಿಸಿ ಘೋಷಣೆ
ಅಕ್ಟೋಬರ್’ವರೆಗೂ ನಟಿ ರಿಯಾ ಚಕ್ರವರ್ತಿಗೆ ಜೈಲು