ದೆಹಲಿ: ಪೈಲಟ್ಗಳು ಪ್ರೀತಿಯಿಂದ ‘ಬಹಾದ್ದೂರ್’ ಎಂದು ಹೆಸರಿಟ್ಟಿದ್ದ ಮಿಗ್-27 ಯುದ್ಧ ವಿಮಾನ ಇಂದು ತನ್ನ ಹಾರಾಟವನ್ನು ಕೊನೆಗೊಳಿಸಿತು.
‘ಕಾರ್ಗಿಲ್ ಯುದ್ಧ ವೀರ’ ಎನಿಸಿಕೊಂಡಿದ್ದ ಯುದ್ಧರಂಗದಲ್ಲಿ 40 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿತ್ತು. ಇಂದು ಜೋಧ್ಪುರದಲ್ಲಿ ಏರ್ಬೇಸ್ನಲ್ಲಿ ತನ್ನ ಕೊನೇ ಹಾರಾಟ ನಡೆಸಿ ನಿವೃತ್ತಿಗೊಂಡಿತು. ಈ ವೇಳೆ ಮಿಗ್-27 ಯುದ್ಧ ವಿಮಾನಕ್ಕೆ ಏರ್ಫೋರ್ಸ್ ಸಿಬ್ಬಂದಿ ಸೆಲ್ಯೂಟ್ ಮಾಡಿ, ನೀರು ಹಾರಿಸುವ ಮೂಲಕ ಬೀಳ್ಕೊಟ್ಟರು.
ಮಿಗ್-27 ಯುದ್ಧ ವಿಮಾನವನ್ನು 1982ರಲ್ಲಿ ರಷ್ಯಾದಿಂದ ಖರೀದಿಸಲಾಗಿತ್ತು. ಏಳು ಮಿಗ್-27 ಯುದ್ಧ ವಿಮಾನಗಳು ಇಂದು ನಿವೃತ್ತವಾಗಿವೆ. ಅವೆಲ್ಲವುಗಳನ್ನೂ ನಿಷ್ಕ್ರಿಯಗೊಳಿಸಲಾಗಿದ್ದು ಇನ್ನು ಮುಂದೆ ದೇಶದ ಯಾವುದೇ ಭಾಗಗಳಲ್ಲೂ ಈ ವಿಮಾನಗಳು ಹಾರಾಡುವುದಿಲ್ಲ ಎಂದು ರಕ್ಷಣಾ ವಕ್ತಾರ ಕರ್ನಲ್ ಸೋಂಬಿತ್ ಘೋಷ್ ತಿಳಿಸಿದ್ದಾರೆ.
ಪೈಲಟ್ಗಳ ಪ್ರೀತಿಯ ‘ಬಹಾದ್ದೂರ್’ ಮಿಗ್-27 ವಿದಾಯ
Follow Us