ನವದೆಹಲಿ: ರೈತರಿಗೆ ನಕಲಿ, ಕಳಪೆ ಕೀಟನಾಶಕ ಮಾರಿದರೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಕೀಟನಾಶಕಗಳ ವ್ಯಾಪಾರ ನಿಯಂತ್ರಿಸುವ ಮತ್ತು ಕೃಷಿಕ ಕೃಷಿ-ರಾಸಾಯನಿಕಗಳ ಬಳಕೆಯಿಂದ ನಷ್ಟ ಉಂಟಾದರೆ ರೈತರಿಗೆ ಪರಿಹಾರ ನೀಡುವ ಮಸೂದೆ ಇದಾಗಿದೆ.
ಪ್ರಸ್ತಾವಿತ ಮಸೂದೆಯಲ್ಲಿ ರೈತರ ಹಾದಿ ತಪ್ಪಿಸಿ ಮೋಸ ಆಗದೇ ಇರಲು ಕೀಟನಾಶಕಗಳ ಜಾಹೀರಾತುಗಳ ಮೇಲೂ ನಿಗಾ ವಹಿಸಲಿದೆ. ಇದು ಕೃಷಿ ಸಮುದಾಯಕ್ಕೆ ಮಹತ್ವದ ಮಸೂದೆ ಮತ್ತು ರೈತರ ಕಲ್ಯಾಣಕ್ಕಾಗಿ ಸರ್ಕಾರದ ಮತ್ತೊಂದು ಹೆಜ್ಜೆಯಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಕೀಟನಾಶಕ ಕಾಯ್ದೆ -1968ರ ಜಾಗವನ್ನು ಈ ಮಸೂದೆ ತುಂಬಲಿದೆ. ರೈತರ ಹಿತಾಸಕ್ತಿ ಕಾಪಾಡುವುದು ಮತ್ತು ಅವರು ಸುರಕ್ಷಿತ ಮತ್ತು ಪರಿಣಾಮಕಾರಿ ಕೀಟನಾಶಕಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ ಎಂದರು.
ರೈತರ ಹಿತಾಸಕ್ತಿ ರಕ್ಷಿಸುವ ಮಸೂದೆ ಶೀಘ್ರ ಮಂಡನೆ
Follow Us