newsics.com
ಜಿಂಡ್(ಹರ್ಯಾಣ): ಡಿಸಿಎಂ ಬಂದಿಳಿಯಬೇಕಾಗಿದ್ದ ಹೆಲಿಪ್ಯಾಡನ್ನೇ ಪ್ರತಿಭಟನಾನಿರತ ರೈತರು ಅಗೆದಿದ್ದರಿಂದ ಭೇಟಿ ಕಾರ್ಯಕ್ರಮ ರದ್ದುಪಡಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಬಂದಿಳಿಯಬೇಕಾಗಿದ್ದ ಹೆಲಿಪ್ಯಾಡ್ ಇರುವ ಸ್ಥಳವನ್ನೇ ಪ್ರತಿಭಟನೆ ನಡೆಸುತ್ತಿದ್ದ ರೈತರು ಅಗೆಡಿದ್ದರಿಂದ ದುಶ್ಯಂತ್ ಚೌಟಾಲ ತಮ್ಮ ಕ್ಷೇತ್ರಕ್ಕೆ ಆಗಮಿಸಲಾಗಲಿಲ್ಲ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಣ್ಣ ಗುಂಪೊಂದು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿದ್ದ ಸ್ಥಳದಲ್ಲಿ ಗುಂಡಿ ತೋಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
‘ಉಪ ಮುಖ್ಯಮಂತ್ರಿಗಳು ಅಧಿಕಾರ ಅಥವಾ ನೂತನ ಕಾಯ್ದೆಯಿಂದ ಸಂಕಷ್ಟಕ್ಕೊಳಗಾಗಿರುವ ರೈತರಲ್ಲಿ ಯಾವುದಾದರೊಂದು ಆಯ್ಕೆಯನ್ನು ಮಾಡಬೇಕು’ ಎಂದು ರೈತರು ಹೇಳಿಕೆ ನೀಡಿದ್ದಾರೆ.