NEWSICS.COM
ನವದೆಹಲಿ: 2017 ಡಿಸೆಂಬರ್ 1, ರ ಮೊದಲು ಮಾರಾಟವಾದ ನಾಲ್ಕು ಚಕ್ರಗಳು ಮತ್ತು ಎಂ & ಎನ್ ವರ್ಗದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ನ.7) ತಿಳಿಸಿದೆ.
1989 ರ ಕೇಂದ್ರ ಮೋಟಾರು ವಾಹನ ನಿಯಮಗಳ ತಿದ್ದುಪಡಿಗಳ ಮೂಲಕ, 2021 ರ ಜನವರಿ 1 ರೊಳಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ಪಡೆಯುವಂತೆ ಆದೇಶ ಹೊರಡಿಸಿದೆ.
ಸಾರಿಗೆ ವಾಹನಗಳಿಗೆ ಫಾಸ್ಟ್ಟ್ಯಾಗ್ ಅಳವಡಿಸಿದ ನಂತರವೇ ಫಿಟ್ನೆಸ್ ಪ್ರಮಾಣಪತ್ರವನ್ನು ನವೀಕರಿಸಲಾಗುತ್ತದೆ ಹಾಗೂ ಮೂರನೇ ವ್ಯಕ್ತಿ ವಿಮೆಗಾಗಿ ಮಾನ್ಯ ಫಾಸ್ಟ್ ಟ್ಯಾಗ್ ಅನ್ನೇ ಬಳಸಬೇಕು ಇದು ಏಪ್ರಿಲ್ 1, 2021 ರಿಂದ ಅನ್ವಯವಾಗಲಿದೆ ಎಂದು ಹೇಳಿದೆ.