Wednesday, November 30, 2022

ಸತ್ಯನಾರಾಯಣ ಪೂಜೆ ಮಾಡಿದ್ರೂ ಸಿಗಲಿಲ್ಲ ಹೆಣ್ಣು: ಅರ್ಚಕನ ಕಿವಿ ಕಚ್ಚಿದ ಅಪ್ಪ, ಮಗ

Follow Us

newsics.com

ಮಧ್ಯಪ್ರದೇಶ: ಮನೆಯಲ್ಲಿ ಮಾಡಿಸಿದ ಸತ್ಯನಾರಾಯಣ ಪೂಜೆ ನಿರೀಕ್ಷಿತ ಫಲ ಕೊಡಲಿಲ್ಲ ಎಂಬ ಕಾರಣಕ್ಕೆ ಪೂಜಾರಿಯನ್ನು ತಂದೆ ಮಕ್ಕಳು ಸೇರಿ ಥಳಿಸಿದ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ನಡೆದಿದೆ.

ಕುಂಜ್‌ಬಿಹಾರಿ (60) ಥಳಿತಕ್ಕೊಳಗಾದ ವ್ಯಕ್ತಿ. ಲಕ್ಷ್ಮೀಕಾಂತ್‌ ಶರ್ಮಾ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಿ ಮನೆಗೆ ಮರಳಿದ್ದೆ. ಆದರೆ ಪೂಜೆ ಮುಗಿದ ಬಳಿಕ ಶರ್ಮಾ ಅವರ ಪುತ್ರ ವಿಚಿತ್ರವಾಗಿ ಆಡಲು ಆರಂಭಿಸಿದ್ದ. ಮಾತ್ರವಲ್ಲದೇ ಅವನಿಗೆ ಹೆಣ್ಣು ಕೂಡ ಸಿಗಲಿಲ್ಲ. ಇದರಿಂದ ರೊಚ್ಚಿಗೆದ್ದ ಹುಡುಗ ಹಾಗೂ ಆತನ ತಂದೆ ಪೂಜೆ ಮಾಡಿದ ಪುರೋಹಿತರನ್ನೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಪೂಜೆಯಲ್ಲಿ ಏನೋ ದೋಷ ಆಗಿದೆ ಎಂದು ಎಣಿಸಿ ಅಪ್ಪ-ಮಕ್ಕಳು ರಾತ್ರಿ ನನ್ನ ಮನೆಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ . ಈ ವೇಳೆ ನೆರೆಹೊರೆಯವರು ಬಂದು ರಕ್ಷಿಸಿದ್ದಾರೆಂದು ಕುಂಜ್‌ ಬಿಹಾರಿ ದೂರಿದ್ದಾರೆ. ಪ್ರಕರಣ ಸಂಬಂಧ ಲಕ್ಷ್ಮಿಕಾಂತ್‌ ಅವರ ಕುಟುಂಬದ ಮೂವರನ್ನು ಬಂಧಿಸಲಾಗಿದೆ.

61 ಕೋಟಿ ರೂ.ಗೆ ಮಾರಾಟವಾದ ಹೂದಾನಿ!

ಮತ್ತಷ್ಟು ಸುದ್ದಿಗಳು

vertical

Latest News

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...
- Advertisement -
error: Content is protected !!