NEWSICS.COM
ರಾಂಚಿ: ಮೌಢ್ಯಗಳಿಗೆ ಒಳಗಾಗಿ ಹೆತ್ತಮಗುವನ್ನು ಬಲಿಕೊಟ್ಟ ಹೇಯಕೃತ್ಯ ವರದಿಯಾಗಿದೆ. ಗಂಡು ಮಗುವಿಗಾಗಿ ಮಾಂತ್ರಿಕನ ಮಾತು ಕೇಳಿ ತಂದೆಯೇ ಆರು ವರ್ಷದ ಮಗುವನ್ನು ಕುತ್ತಿಗೆ ಕತ್ತರಿಸಿ ಬಲಿಕೊಟ್ಟ ಘಟನೆ ನಡೆದಿದೆ.
ಜಾರ್ಖಂಡ್ ಬಳಿ ಈ ಕೃತ್ಯ ನಡೆದಿದ್ದು, ಮಾಂತ್ರಿಕನ ಬಳಿ ಸಲಹೆ ಕೇಳಿದಾಗ ಗಂಡು ಮಗು ಬೇಕೆಂದರೆ ನಿಮ್ಮ ಮಗಳನ್ನು ಬಲಿ ಕೊಡಬೇಕೆಂದು ಸಲಹೆ ನೀಡದ್ದ. ಆದ್ದರಿಂದ ಸುಮನ್ ನೆಗಾಸಿಯಾ( 26) ಎಂಬಾತ ಪತ್ನಿ ತವರು ಮನೆಗೆ ಹೋದ ವೇಳೆ ಮಗಳನ್ನು ಕುತ್ತಿಗೆ ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪೆಶ್ರಾರ್ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಸಲಹೆ ನೀಡಿದ್ದ ಮಾಂತ್ರಿಕನನ್ನು ಹುಡುಕುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.