ಅಹಮದಾಬಾದ್: ಮುಂದಿನ ತಿಂಗಳು ಮಕ್ಕಳ ಮದುವೆ ನಡೆಯಬೇಕಿತ್ತು. ಆದರೆ, ವರನ ತಂದೆ, ವಧುವಿನ ತಾಯಿ ಒಟ್ಟಿಗೇ ಓಡಿಹೋದ್ದರಿಂದ ಮದುವೆ ಮುರಿದುಬಿದ್ದಿದೆ.
ಇಬ್ಬರೂ (ವರನ ತಂದೆ, ವಧುವಿನ ತಾಯಿ) ಬಾಲ್ಯ ಸ್ನೇಹಿತರಾಗಿದ್ದು, ಕತರಗಾಮ್ ನಲ್ಲಿ ಅಕ್ಕಪಕ್ಕದ ನಿವಾಸಿಗಳಾಗಿದ್ದರು. ತಮ್ಮ ಮದುವೆಗೆ ಮುನ್ನವೂ ಓಡಿಹೋಗಲು ಯತ್ನಿಸಿದ್ದರು. ಆದರೆ ಆಕೆ(ವಧುವಿನ ತಾಯಿ)ಯನ್ನು ವಜ್ರದ ವ್ಯಾಪಾರಿಗೆ ಮದುವೆ ಮಾಡಿಕೊಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರೂ ಹತ್ತು ದಿನಗಳಿಂದ ನಾಪತ್ತೆಯಾಗಿದ್ದಾರೆ.
ವರನ ತಂದೆ ಸೂರತ್ ನ ಕತರ್ಗಾಮ್ನಲ್ಲಿ ಜವಳಿ ಉದ್ಯಮಿಯಾಗಿದ್ದಾರೆ. ವಧುವಿನ ತಾಯಿ ನವಸಾರಿ ಮೂಲದವರಾಗಿದ್ದು, ಗೃಹಣಿಯಾಗಿದ್ದರು.
ಓಡಿಹೋದ ವರನ ತಂದೆ, ವಧುವಿನ ತಾಯಿ; ಮುರಿದುಬಿತ್ತು ಮಕ್ಕಳ ಮದುವೆ!
Follow Us