newsics.com
ಮುಸ್ಸೋರಿ: ದೀಕ್ಷಾ, ಭಾರತ ಟಿಬೇಟ್ ಗಡಿ ಭದ್ರತಾಪಡೆಯ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅವರ ನಿರ್ಗಮನ ಪಥ ಸಂಚಲನ ಮುಸ್ಸೋರಿಯಲ್ಲಿ ನಡೆಯಿತು. ಬಳಿಕ ಅವರನ್ನು ಭಾರತ- ಟಿಬೇಟ್ ಗಡಿ ಭದ್ರತಾಪಡೆಯ ಅಧಿಕಾರಿಯಾಗಿ ನೇಮಕ ಮಾಡಲಾಯಿತು.
ಅವರ ತಂದೆ ಕಮಲೇಶ್ ಕುಮಾರ್ ಕೂಡ ಇದೇ ಭದ್ರತಾಪಡೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮಗಳು ಹಿರಿಯ ಅಧಿಕಾರಿ, ತಂದೆ ಜ್ಯೂನಿಯರ್ ಅಧಿಕಾರಿ.
ಮಗಳು ಪೊಲೀಸ್ ಸಮವಸ್ತ್ರ ಧರಿಸಿ ಎದುರು ಬಂದಾಗ ತಂದೆ ಅವರಿಗೆ ಸೆಲ್ಯೂಟ್ ಮಾಡಿದರು. ಈ ಚಿತ್ರ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ