newsics.com
ಚೆನ್ನೈ: ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂಬ ಕಾರಣಕ್ಕೆ ಟಿವಿ ಪತ್ರಕರ್ತನೊಬ್ಬನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಡ್ರಗ್ ಡೀಲರ್‍ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಭಯದಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಪತ್ರಕರ್ತನನ್ನು ಹತ್ಯೆ ಮಾಡಿದೆ.
27 ವರ್ಷದ ಇಸ್ರೇವೆಲ್ ಮೋಸೆಸ್ ಕೊಲೆಯಾದ ಪತ್ರಕರ್ತ. ಭಾನುವಾರ ಸಂಜೆ ಮನೆಯಲ್ಲಿದ್ದ ಮೋಸಸ್ ಅವರಿಗೆ ಕರೆ ಮಾಡಿ ಮನೆಯಿಂದ ಹೊರಗೆ ಬರುವಂತೆ ದುಷ್ಕರ್ಮಿಗಳು ಕರೆದಿದ್ದಾರೆ. ಈ ವೇಳೆ ಹೊರಗೆ ಬಂದ ಮೋಸಸ್ ಆವರನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಮೊಸಸ್ ಹೊರಗೆ ಬಂದಾಗ ಆತನನ್ನು ಐವರು ಹಿಡಿದಿದ್ದರು. ಮೋಸಸ್ ನ ಸ್ನೇಹಿತರಿರಬಹುದೆಂದು ಕುಟುಂಬಸ್ಥರು ಹೆಚ್ಚು ಗಮನ ನೀಡಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಕತ್ತು ಹಿಸುಕಿ ಆತನನ್ನು ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ. ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನನ್ವಯ ಪೊಲೀಸರು ಐವರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರು ಸ್ಥಳೀಯ ಕೆರೆಯ ಅಂಗಳದಲ್ಲಿ ರಾತ್ರಿ ವೇಳೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ರಸ್ತೆ ಅಪಘಾತ; ಸ್ಥಳದಲ್ಲೇ 6 ಜನ ಸಾವು, ನಾಲ್ವರಿಗೆ ಗಾಯ
ಬಾಲಕಿಯರನ್ನು ಒತ್ತೆಯಲ್ಲಿರಿಸಿ ಅತ್ಯಾಚಾರ: ನಾಲ್ಕು ಆರೋಪಿಗಳ ಬಂಧನ
ಬಳಸಿ ಬಿಸಾಡುವ ಕಪ್’ಗಳಲ್ಲಿ ಟೀ, ಕಾಫಿ ಕುಡಿವ ಮುನ್ನ ಯೋಚಿಸಿ
ಪ್ರಿ ವೆಡ್ಡಿಂಗ್ ಫೋಟೊಶೂಟ್; ತೆಪ್ಪ ಮುಳುಗಿ ವಧು, ವರ ಸಾವು
ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು: ಆತಂಕಗೊಂಡ ಜನರು
ಕೊರೋನಾ ಲಾಕ್’ಡೌನ್; ಹೃದಯಾಘಾತದ ಸಾವು ಶೇ.4 ರಷ್ಟು ಹೆಚ್ಚಳ