ನವದೆಹಲಿ: ಇಂದು ಸಂಸತ್ತಿನಲ್ಲಿ ತಮ್ಮ ಎರಡನೇ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನಾರೋಗ್ಯದ ಕಾರಣದಿಂದ ಕೊನೆಯ ಎರಡು ಪುಟಗಳ ತಮ್ಮ ಭಾಷಣವನ್ನು ಓದದೆ ಮುಕ್ತಾಯಗೊಳಿಸಿದರು.
ಗರಿಷ್ಠ 160 ನಿಮಿಷಗಳಿಗಿಂತ ಹೆಚ್ಚು ಕಾಲ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ ಸಚಿವರು, ಕೊನೆಯಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಅಸ್ವಸ್ಥಗೊಂಡ ಕಾರಣ ಅದನ್ನು ಮೊಟಕುಗೊಳಿಸಿದೆ. 2019 ಜುಲೈನಲ್ಲಿ ನಲ್ಲಿ ನಿರ್ಮಲಾ ಸೀತಾರಾಮನ್ 2 ಗಂಟೆ 17 ನಿಮಿಷ ಬಜೆಟ್ ಭಾಷಣ ಮಾಡಿದ್ದರು. ಈಗ ತಮ್ಮ ದಾಖಲೆಯನ್ನೇ ಅವರೇ ಮುರಿದಿದ್ದಾರೆ.
ಅನಾರೋಗ್ಯ ಹಿನ್ನೆಲೆ: ಬಜೆಟ್ ಭಾಷಣ ಅಪೂರ್ಣ
Follow Us