newsics.com
ನವದೆಹಲಿ: ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಸ್ಪುಟ್ನಿಕ್ v ಅಂತಿಮ ಪ್ರಯೋಗ ಭಾರತದಲ್ಲಿ ನಡೆಯಲಿದೆ.
ರಷ್ಯಾದ ಕೊರೋನಾ ಲಸಿಕೆಯ ಟ್ರಯಲ್ಗೆ 1ರಿಂದ 2 ಸಾವಿರ ಮಂದಿ ಹೆಸರು ನೋಂದಾಯಿಸಿಕೊಳ್ಳಲಿದ್ದು, ದೇಶಾದ್ಯಂತದ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಟ್ರಯಲ್ ನಡೆಯಲಿದೆ.
ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ಮತ್ತು ಡಾ.ರೆಡ್ಡಿ ಲ್ಯಾಬೊರೇಟರೀಸ್ ಸಂಸ್ಥೆ ನಡುವೆ ಒಪ್ಪಂದ ಮಾಡಿಕೊಂಡಿರುವುದರಿಂದ ಸ್ಪುಟ್ನಿಕ್ v ನ ಪ್ರಯೋಗ ಭಾರತದಲ್ಲೂ ನಡೆಯಲಿದೆ.
ಸ್ಪುಟ್ನಿಕ್ V ಕೊರೋನಾ ಲಸಿಕೆಗೆ ಭಾರತದಲ್ಲಿ ಡಾ. ರೆಡ್ಡಿ ಲ್ಯಾಬೊರೇಟರೀಸ್ ಲಿ. ಸಂಸ್ಥೆ ಅಂತಿಮ ಟ್ರಯಲ್ ಕೈಗೊಳ್ಳಲಿದೆ ಎಂಬ ರೆಡ್ಡಿ ಲ್ಯಾಬೊರೇಟರೀಸ್ ಮೂಲಗಳು ತಿಳಿಸಿವೆ. ರಷ್ಯಾವು ಅಕ್ಟೋಬರ್ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ವಾರಗಳಲ್ಲೇ ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ v ಅಂತಿಮ ಪ್ರಯೋಗ
Follow Us