NEWSICS.COM
ಮುಂಬೈ: ಹಿಂದೂಗಳ ಭಾವನೆಗೆ ದಕ್ಕೆ ತರಲಾಗಿದೆ ಎಂದು ಕಿರುತೆರೆಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಇತ್ತೀಚೆಗೆ ಪ್ರಸಾರವಾದ ಎಪಿಸೋಡ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಮತ್ತು ನಟ ಅನೂಪ್ ಸೋನಿ ಭಾಗವಹಿಸಿದ್ದರು.
ಅವರಿಗೆ 1927ರ ಡಿ.25 ರಂದು ಡಾ. ಬಿ ಆರ್ ಅಂಬೇಡ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಯಾವ ಪುಸ್ತಕ ಸುಟ್ಟು ಹಾಕಿದರು? ಎನ್ನುವ ಪ್ರಶ್ನೆ ಕೇಳಿದ್ದರು.ಇದಕ್ಕೆಪುರಾತನ ಹಿಂದೂ ಗ್ರಂಥವಾದ ಮನುಸ್ಮೃತಿಯು ಜಾತಿ ತಾರತಮ್ಯ ಮತ್ತು ಅಸ್ಪ್ರಶ್ಯತೆ ಯನ್ನು ಬೆಂಬಲಿಸುತ್ತದೆ ಎಂಬ ವಿವರಣೆಯನ್ನೂ ನೀಡಿದ್ದರು.
ಈ ರೀತಿಯ ಹೇಳಿಕೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಶಾಸಕ ಅಭಿಮನ್ಯು ಪವಾರ್ ಆರೋಪಿಸಿದ್ದರು. ಈ ಕಾರಣಕ್ಕೆ ಬಿಗ್ ಬಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಸುಶಾಂತ್ ಸಿಂಗ್ ಪ್ರಕರಣ: ಪೊಲೀಸರಿಂದ ಹೈಕೋರ್ಟ್’ಗೆ ಅಫಿಡವಿಟ್ ಸಲ್ಲಿಕೆ