newsics.com
ಭುವನೇಶ್ವರ: ಒಡಿಶಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 127ಕ್ಕೂ ಹೆಚ್ಚು ಕೊವಿಡ್ 19 ರೋಗಿಗಳನ್ನು ರಕ್ಷಿಸಲಾಗಿದೆ.
ಕಳೆದ ತಿಂಗಳಷ್ಟೇ ಕಾರ್ಯಾರಂಭ ಮಾಡಿದ್ದ ಸದ್ಗುರು ಕೋವಿಡ್ ಆಸ್ಪತ್ರೆಯ ಗ್ರೌಂಡ್ ಫ್ಲೋರ್‌ನಲ್ಲಿರುವ ಐಸಿಯುನಲ್ಲಿ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಐಸಿಯುನಲ್ಲಿ ಹೊಗೆ ತುಂಬಿಕೊಂಡಿತ್ತು, ತಕ್ಷಣವೇ ಕೋವಿಡ್ ರೋಗಿಗಳನ್ನು ಆಸ್ಪತ್ರೆಯಿಂದ ಹೊರಗೆ ಕಳಿಸುವಲ್ಲಿ ಯಶಸ್ವಿಯಾದರು. ಹಲವು ಗಿಗಳು ಪ್ರಜ್ಞೆ ತಪ್ಪಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಕಳೆದ ಆ.6 ರಂದು ಅಹಮದಾಬಾದಿನಲ್ಲಿ ಮೂವರು ಮಹಿಳೆಯರು ಸೇರಿ 8 ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದರು. ಆ.9 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 10 ರೋಗಿಗಳು ಮೃತಪಟ್ಟಿದ್ದರು.
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; 127 ಸೋಂಕಿತರ ಸ್ಥಳಾಂತರ
Follow Us