newsics.com
ಮುಂಬೈ: ಇಲ್ಲಿನ ಕಾಂದಿವಲಿಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಭಾನುವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಇಬ್ಬರು ಮೃತಪಟ್ಟು, ಓರ್ವನ ಸ್ಥಿತಿ ಗಂಭೀರವಾಗಿದೆ.
ಸುಭಾಷ್ ಖೋಡೆ (25) ಹಾಗೂ ಯುವರಾಜ್ ಪವಾರ್(25) ಮೃತಪಟ್ಟವರು. ದುರಂತ ಸಂಭವಿಸಿದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂವರು ದೇವಸ್ಥಾನದ ಬಾಗಿಲನ್ನು ಮುಚ್ಚಿ ಒಳಗೆ ಮಲಗಿದ್ದರು ಎನ್ನಲಾಗಿದ್ದು. ಭಾನುವಾರ ಬೆಳಗ್ಗಿನ ಜಾವ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಶ್ರೀನಗರ ಹೈವೆಯಲ್ಲಿ ಗುಡ್ಡ ಕುಸಿತ; 250 ಕಿಮೀ ಉದ್ದ ನಿಂತ 1,500 ವಾಹನ!
ಕಡಲ ತೀರ ಸ್ವಚ್ಛಗೊಳಿಸಿದ ಉಡುಪಿಯ ನವದಂಪತಿ ಕಾರ್ಯಕ್ಕೆ ಮೋದಿ ಶ್ಲಾಘನೆ
$22 ದಶಲಕ್ಷಕ್ಕೆ ಮೈಕೆಲ್ ಜಾಕ್ಸನ್ ಎಸ್ಟೇಟ್ ಮಾರಾಟ!