ತಿರುಪತಿ: ಆಂಧ್ರಪ್ರದೇಶದ ತಿರುಪತಿ ವಿಮಾನ ನಿಲ್ದಾಣದಲ್ಲಿ ಸಂಭವನೀಯ ಭಾರೀ ದುರಂತವೊಂದು ಸ್ವಲ್ಪದರಲ್ಲಿಯೇ ತಪ್ಪಿದೆ. ವಿಮಾನ ನಿಲ್ದಾಣದ ಒಳಗಡೆ ಸಂಚರಿಸುತ್ತಿದ್ದ ಅಗ್ನಿಶಾಮಕ ದಳದ ವಾಹನ ಇದ್ದಕ್ಕಿದ ಹಾಗೆ ಮಗುಚಿ ಬಿತ್ತು. ಹೈದರಾಬಾದ್ ನಿಂದ ಆಗಮಿಸುತ್ತಿದ್ದ ವಿಮಾನ ಲ್ಯಾಡಿಂಗ್ ಆಗಲು ಕೆಲವೇ ನಿಮಿಷ ಇರುವಾಗ ಈ ಘಟನೆ ಸಂಭವಿಸಿತ್ತು.
ತಕ್ಷಣ ವಿಮಾನವನ್ನು ಬೆಂಗಳೂರಿಗೆ ತೆರಳಲು ಸೂಚಿಸಲಾಯಿತು. ಸುಮಾರು ಮೂರು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ವಿಮಾನ ನಿಲ್ದಾಣವನ್ನು ಮತ್ತೆ ಹಾರಾಟಕ್ಕೆ ಸಜ್ಜುಗೊಳಿಸಲಾಯಿತು.
ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಇದೀಗ ವಿಮಾನ ನಿಲ್ದಾಣದ ಚಟುವಟಿಕೆ ಸಹಜ ಸ್ಥಿತಿಗೆ ಮರುಕಳಿಸಿದೆ.