Saturday, January 23, 2021

ಕೊಳೆಗೇರಿಯಲ್ಲಿ ಅಗ್ನಿ ಅನಾಹುತ; 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ

newsics.com
ಕೋಲ್ಕತ್ತಾ: ಇಲ್ಕಿನ ಬಾಗ್‌ಬಜಾರ್ ಪ್ರದೇಶದ ಕೊಳೆಗೇರಿಯೊಂದರಲ್ಲಿ ಬುಧವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಹಲವು ಗುಡಿಸಲುಗಳು ಸುಟ್ಟಿವೆ.
ಚಿತ್ ಪೋರ್ಲಾಕ್ ಗೇಟ್ ಸೇತುವೆ ಬಳಿಯ ಬಾಗ್‌ಬಜಾರ್ ಮಹಿಳಾ ಕಾಲೇಜಿನ ಪಕ್ಕದಲ್ಲಿರುವ ಕ್ಷಿರೋದ್ದ್ಯಾವಿನೋದ್ ಅವೆನ್ಯೂದಲ್ಲಿನ ಕೊಳೆಗೇರಿಯ ಹಲವು ಮನೆಗಳಿಗೆ ಬೆಂಕಿ ಆವರಿಸಿದೆ. 24ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಬೆಂಕಿಗೆ ಆಹುತಿಯಾಗಿರುವ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ಜನರನ್ನು ಸಮಯಕ್ಕೆ ಸರಿಯಾಗಿ ಸ್ಥಳಾಂತರಿಸಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಶಾರದಾ ಮೇಯರ್ ಬ್ಯಾರಿಗೂ ಬೆಂಕಿ ಹರಡಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಟ್‌ಪೋರ್ ಲಾಕ್ ಗೇಟ್ ಸೇತುವೆಯಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನಾವು ಇಡೀ ಪ್ರದೇಶದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದೇವೆ. ಕನಿಷ್ಠ 40 ಮನೆಗಳು ಬೆಂಕಿಯಿಂದ ಸಮಸ್ಯೆಗೆ ಸಿಲುಕಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 14,256 ಜನರಿಗೆ ಕೊರೋನಾ ಸೋಂಕು,152 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  14, 256 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.39,684 ಕ್ಕೆ...

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಹೆಸರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...
- Advertisement -
error: Content is protected !!