newsics.com
ನವದೆಹಲಿ: ಮಾಸ್ಕ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ. ಮೂವರನ್ನು ರಕ್ಷಿಸಲಾಗಿದೆ.
ನವದೆಹಲಿಯ ಮಾಯಾಪುರಿ ಪ್ರದೇಶದಲ್ಲಿ ಇಂದು (ಡಿ.26) ಬೆಳಗ್ಗೆ ನಡೆದಿದೆ. ಬೆಳಗಿನ ಜಾವ 3.54ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ. ವಿಷಯ ತಿಳಿದಾಕ್ಷಣ ಅಗ್ನಿಶಾಮಕ ದಳದ 6 ವಾಹನಗಳು ಕಾರ್ಯಾಚರಣೆ ನಡೆಸಿದೆ. ಜುಗಲ್ ಕಿಶೋರ್ ಎಂಬಾತ ಮೃತಪಟ್ಟಿದ್ದಾನೆ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದ್ದಾರೆ.
ತಯಾರಿಕಾ ಘಟಕದ ಮೂರನೇ ಮಹಡಿಯಲ್ಲಿರುವ ಯಂತ್ರಗಳು ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾದ ನಂತರ ಈ ಅಪಘಾತ ಸಂಭವಿಸಿದೆ ಎಂದು ಡಿಎಫ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ. ಡಿಎಫ್ ಎಸ್ ತಂಡವು ಘಟಕದ ಬಾಗಿಲು ಮತ್ತು ಗೋಡೆಗಳನ್ನು ಒಡೆದು ಮೂವರನ್ನು ರಕ್ಷಿಸಿದೆ ಎಂದು ಅವರು ಹೇಳಿದರು. ರಕ್ಷಿಸಿದವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶದಲ್ಲಿ ದೇಶದ ಮೊದಲ ಬಿಸಿಗಾಳಿ ಬಲೂನ್ ಸಫಾರಿ ಆರಂಭ
ದೇಶದಲ್ಲಿ ಒಂದೇ ದಿನ 22272 ಮಂದಿಗೆ ಕೊರೋನಾ ಸೋಂಕು, 251 ಬಲಿ
ಜಪಾನ್’ನಲ್ಲಿ ಹೊಸ ಕೊರೋನಾದ ಮೊದಲ ಪ್ರಕರಣ ದಾಖಲು