ಸೂರತ್: ಗುಜರಾತ್ ನ ಸೂರತ್ ಸಮೀಪದ ಹಾಜಿರದಲ್ಲಿ ಒಎನ್ ಜಿಸಿ ತೈಲ ಸ್ಥಾವರದಲ್ಲಿ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಮುಂಜಾನೆ ಮೂರು ಗಂಟೆಗೆ ಈ ಅನಾಹುತ ನಡೆದಿದೆ. ನಸುಕಿನ ಜಾವ ಮೂರು ಗಂಟೆಗೆ ಬೆಂಕಿಯಿಂದಾಗಿ ಮೂರು ಸ್ಫೋಟ ಕೂಡ ಸಂಭವಿಸಿದೆ ಎಂದು ವರದಿಯಾಗಿದೆ.
ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಯನ್ನು ಇದೀಗ ನಿಯಂತ್ರಿಸಲಾಗಿದೆ ಎಂದು ಸೂರತ್ ಜಿಲ್ಲಾಧಿಕಾರಿ ಧವಲ್ ಪಟೇಲ್ ಹೇಳಿದ್ದಾರೆ. ಕಳೆದ ತಿಂಗಳು ಅಸ್ಸಾಂನಲ್ಲಿ ಕೂಡ ತೈಲ ಸ್ಥಾವರದಲ್ಲಿ ಭಾರೀ ದುರಂತ ಸಂಭವಿಸಿತ್ತು