ಅಹಮದಾಬಾದ್: ಅಹಮದಾಬಾದ್ ನಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್ ವಿಮಾನದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಕ್ಷಣ ಬೆಂಕಿ ನಂದಿಸಲಾಗಿದ್ದು ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಗೋ ಏರ್ ವಿಮಾನ ‘ಜಿ8 802’ರ ಬಲಭಾಗದ ಎಂಜಿನ್‌ಗೆ ಟೇಕ್‌ಆಫ್ ವೇಳೆ ಅನ್ಯವಸ್ತು ಡಿಕ್ಕಿಯಾಗಿ ಬೆಂಕಿ ತಗುಲಿರಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಗೋ ಏರ್ ವಿಮಾನದಲ್ಲಿ ಬೆಂಕಿ
Follow Us