ಮುಂಬೈ: ದೇಶದ ಪ್ರಥಮ ಇಂಟರ್ ಸಿಟಿ ಇಲೆಕ್ಟ್ರಿಕ್ ಬಸ್ ಸೇವೆ ಶುಕ್ರವಾರ ಆರಂಭವಾಯಿತು. ಮುಂಬೈ ಮತ್ತು ಪೂನಾ ನಡುವೆ ಇದು ಸಂಚರಿಸಲಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ನೂತನ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ಬಸ್ ಸೇವೆಗೆ ಆದ್ಯತೆ ನೀಡಲಾಗುತ್ತಿದೆ..