Monday, May 17, 2021

ಒಂದೇ ವಾರದಲ್ಲಿ ಒಂದೇ ಕುಟುಂಬದ ಐವರು ಕೊರೋನಾಗೆ ಬಲಿ!

newsics.com
ಮುಂಬೈ(ಮಹಾರಾಷ್ಟ್ರ): ಒಂದೇ ವಾರದ ಅವಧಿಯಲ್ಲಿ ಒಂದೇ ಕುಟುಂಬದ ಐವರು ಕೊರೋನಾಗೆ ಬಲಿಯಾಗಿದ್ದಾರೆ.
ನಾಸಿಕ್ ನ ಯೆಯೋಲಾ ತಾಲೂಕಿನ ರಾಜಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಜನ ಆತಂಕಕ್ಕೀಡಾಗಿದ್ದಾರೆ.
ಮಲನ್‌ಬಾಯಿ ಜಾಧವ್, ಅವರ ಪುತ್ರ ಅರುಣ್ ಜಾಧವ್, ಇಬ್ಬರು ಪುತ್ರಿಯರಾದ ಶೋಭಾ ಸಾದಿವೇವ್ ಮತ್ತು ಛಾಯಾ ವಾಘ್ ಮತ್ತು ಮೊಮ್ಮಗ ಅಮಿತ್ ಜಾಧವ್ ಕೊರೋನಾಗೆ ಬಲಿಯಾದವರು.
ಮಲನ್‌ಬಾಯಿ ಜಾಧವ್ ಅವರು ರಾಜಪುರದಲ್ಲಿ ಧಾನ್ಯದ ಅಂಗಡಿ ನಡೆಸುತ್ತಿದ್ದರು. ಅವರ ಇಬ್ಬರು ಹೆಣ್ಣುಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಳ್ಳಲು ಮುಂಬೈನಿಂದ ರಾಜಪುರಕ್ಕೆ ಬಂದಿದ್ದರು.
ಅಮಿತ್ ಜಾಧವ್ ಅವರ ಪತ್ನಿ, ಮಗು ಮತ್ತು ಅವರ ದೈಹಿಕ ಅಂಗವಿಕಲ ಸಹೋದರ ಕುಟುಂಬದಲ್ಲಿ ಬದುಕುಳಿದಿದ್ದಾರೆ. ಅಮಿತ್ ಕುಟುಂಬದ ಅಧಾರ ಸ್ತಂಭವಾಗಿದ್ದರು.

ಮತ್ತಷ್ಟು ಸುದ್ದಿಗಳು

Latest News

ಮರದ ಮೇಲೆಯೇ 11 ದಿನ‌ ಐಸೋಲೇಟ್ ಆದ ಕೊರೋನಾ ಸೋಂಕಿತ ವಿದ್ಯಾರ್ಥಿ!

newsics.com ಹೈದರಾಬಾದ್: ಕೊರೋನಾ ಸೋಂಕಿತರು ಹೋಂ‌ ಐಸೋಲೇಷನ್ ಗೆ ಒಳಗಾಗಲು ಹಲವು‌ ಕುಟುಂಬಗಳು ಮನೆಯಲ್ಲಿ ಜಾಗದ ಅಭಾವವನ್ನೂ ಎದುರಿಸುತ್ತಿವೆ. ತೆಲಂಗಾಣದ ನಲಗೊಂಡ ಜಿಲ್ಲೆಯ ಹಲವು ಕುಟುಂಬಗಳು ಅಡುಗೆ ಕೋಣೆ...

ಏನಿದು ಲಸಿಕೆ ಪಾಸ್‌ಪೋರ್ಟ್‌?

newsics.com ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ನಡೆಯುತ್ತಿರುವ ವೇಳೆಯಲ್ಲೇ 'ಲಸಿಕೆ ಪಾಸ್‌ಪೋರ್ಟ್‌' ಸದ್ದು ಮಾಡುತ್ತಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಪದ. ಹೆಚ್ಚು ಜನರು ಲಸಿಕೆ...

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್'ಗಳನ್ನು ಫೇಸ್'ಬುಕ್'ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ. ಮಧುರೈ ಜಿಲ್ಲೆಯ ಕಾಜಿಮಾರ್...
- Advertisement -
error: Content is protected !!