NEWSICS.COM
ರಾಜಸ್ಥಾನ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಕಾಮನ್ ಪ್ರದೇಶದಲ್ಲಿ ಮಿತಿಮೀರಿ ಮದ್ಯ ಸೇವಿಸ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ (ನ14) ತಿಳಿಸಿದ್ದಾರೆ.
ಅತಿಯಾದ ಮದ್ಯ ಸೇವನೆಯಿಂದ ಅನಾರೋಗ್ಯ ಉಂಟಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನಾಲ್ವರು ಕಳೆದೆರಡು ದಿನಗಳಲ್ಲಿ ಮೃತಪಟ್ಟಿದ್ದಾರೆ. ಅವರ ಶವವನ್ನು ಕುಟುಂಬದವರು ಅಂತಿಮ ಸಂಸ್ಕಾರ ನಡೆಸಿದ ಕಾರಣ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ.
ಐದನೇ ವ್ಯಕ್ತಿ ಮಥುರಾ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದು, ಮರಣೋತ್ತರ ವರದಿ ಲಭ್ಯವಾದ ನಂತರ ಸಾವಿಗೆ ಕಾರಣ ಸ್ಪಷ್ಟವಾಗುತ್ತದೆ ಎಂದು ಕಮಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮದ್ಯವು ನಕಲಿಯಾಗಿತ್ತೊ ಎಂಬ ಬಗ್ಗೆ ಗುಮಾನಿ ಇದ್ದು ಅಬಕಾರಿ ಇಲಾಖೆ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಎಸ್‌ಎಚ್‌ಒ ತಿಳಿಸಿದೆ.