ಕ್ಯಾಲಿಕಟ್: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳಕ್ಕೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೋಳಿಕ್ಕೊಡ್ ವಿಮಾನ ನಿಲ್ದಾಣ ರನ್ವೇನಲ್ಲಿ ಸ್ಕಿಡ್ ಆಗಿದೆ.
ಶುಕ್ರವಾರ ಸಂಜೆ 7:40 ರ ಹೊತ್ತಿಗೆ ಈ ಘಟನೆ ನಡೆದಿದೆ. ದುಬೈನಿಂದ ಕೋಳಿಕ್ಕೊಡ್ ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (IX-1344) ಸ್ಕಿಡ್ ಆಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ. ಅದೃಷ್ಟವಶಾತ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ದುಬೈ-ಕೊಜಿಕೋಡ್ ನಡುವಿನ ಮಾರ್ಗದ ಬೋಯಿಂಗ್ 737 ಎಕ್ಸ್ 1344 ವಿಮಾನದಲ್ಲಿ 191 ಪ್ರಯಾಣಿಕರನ್ನು ಹೊಂದಿತ್ತು ಎನ್ನಲಾಗಿದ್ದು, ಸಂಜೆ 7: 41 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನಯಾನ ಮೂಲಗಳ ಪ್ರಕಾರ, ಇದು ರನ್ವೇಯನ್ನು ಓವರ್ ಶಾಟ್ ಮಾಡಿದಂತೆ ಕಂಡುಬಂದಿದೆ ಎನ್ನಲಾಗುತ್ತಿದೆ. ಕನಿಷ್ಠ 24 ಆಂಬುಲೆನ್ಸ್ಗಳು ಮತ್ತು ಅಗ್ನಿಶಾಮಕ ಟೆಂಡರ್ಗಳನ್ನು ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ.
ಕೋಳಿಕ್ಕೊಡ್’ನಲ್ಲಿ ವಿಮಾನ ಸ್ಕಿಡ್
Follow Us