ಕೊಯಿಕೋಡ್: ಕೇರಳದಲ್ಲಿ ವಿಮಾನ ದುರಂತ ಸಂಭವಿಸಿದೆ. ಕೊಯಿಕೋಡ್ ಸಮೀಪದ ಕರಿಪುರಂ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾದ ಪರಿಣಾಮ ಪೈಲಟ್ ಸಹಿತ ಮೂವರು ಇದುವರೆಗೆ ಸಾವನ್ನಪ್ಪಿದ್ದಾರೆ. ಇಬ್ಬರು ಪೈಲಟ್ ಗಳ ಪೈಕಿ ಒರ್ವ ಪೈಲಟ್ ಅಸುನೀಗಿದ್ದಾನೆ. ದುಬೈನಿಂದ ಈ ವಿಮಾನ ಆಗಮಿಸಿತ್ತು.
ವಿಮಾನ ರನ್ ವೇ ಬಿಟ್ಟು ಮುಂದಕ್ಕೆ ಚಲಿಸಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಎರಡು ತುಂಡಾಗಿದೆ. ಸಂಜೆ 7.45ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ಪೈಲಟ್ ಸಾಥೆ ಎಂಬವರು ಮೃತಪಟ್ಟಿದ್ದಾರೆ. ಸಹ ಪೈಲಟ್ ಅಖಿಲೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಮಾನದಲ್ಲಿ ಆರು ಸಿಬ್ಬಂದಿಯ ಸಹಿತ 190 ಪ್ರಯಾಣಿಕರಿದ್ದರು. ದುರಂತದಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.