ನವದೆಹಲಿ: ಏಪ್ರಿಲ್‌ನಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ. ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಶೇ.4 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ಸಮಾಲೋಚನಾ ವರದಿಯನ್ನು ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದಲ್ಲಿ ನ್ಯಾವಿಗೇಷನ್ ಸೌಲಭ್ಯ ಒದಗಿಸಲು ನೇವಿಗೇಷನ್ ಶುಲ್ಕ ವಸೂಲಿ ಮಾಡಲಾಗುತ್ತದೆ. ವಿಮಾನ ಪ್ರಯಾಣಿಕರಿಗೆ ಪ್ರತಿ ವಿಮಾನದ ಆಧಾರದ ಮೇಲೆ ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಈ ಬಗ್ಗೆ ಮುಂದಿನ ವಾರ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಏಪ್ರಿಲ್‌ನಿಂದ ವಿಮಾನ ಯಾನ ದುಬಾರಿ
Follow Us