ಬೆಂಗಳೂರು: ಹೆಚ್ಚುತ್ತಿರುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಫ್ಲಿಫ್ ಕಾರ್ಟ್ ಹೊಸ ಸೇವೆ ಆರಂಭಿಸಿದೆ. ಗ್ರಾಹಕರು ಬುಕ್ ಮಾಡಿದ 90 ನಿಮಿಷಗಳ ಒಳಗೆ ನಿಮ್ಮ ಆರ್ಡರ್ ಕೈ ಸೇರಲಿದೆ. ಪ್ಲಿಫ್ ಕಾರ್ಟ್ ಕ್ವಿಕ್ ಎಂಬ ಈ ಯೋಜನೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆರಂಭವಾಗಿದೆ.
ಆರಂಭದಲ್ಲಿ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ಸೌಲಭ್ಯ ದೊರೆಯಲಿದೆ. ಪಡಿತರ, ತಾಜಾ ತರಕಾರಿ ಮತ್ತು ಮೊಬೈಲ್ ಸೇವೆ ಈ ಮೂಲಕ ಲಭ್ಯವಾಗಲಿದೆ. ಈ ವರ್ಷದ ಅಂತ್ಯಕ್ಕೆ ದೇಶದ ಇತರ ಆರು ನಗರಗಳಿಗೆ ವಿಸ್ತರಿಸಲು ಸಂಸ್ಥೆ ಯೋಚಿಸಿದೆ.
ಸ್ಥಳೀಯ ಮಟ್ಟದಲ್ಲಿ ವಸ್ತುಗಳನ್ನು ಶೀಘ್ರವಾಗಿ ಪೂರೈಸುವ ಸಂಬಂಧ ಇತರ ಹಲವು ಸಂಸ್ಥೆಗಳೊಂದಿಗೆ ಪ್ಲಿಫ್ ಕಾರ್ಟ್ ಒಪ್ಪಂದ ಮಾಡಿಕೊಂಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಆನ್ ಲೈನ್ ಸೇವೆಗಳು ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇದು ಶೇಕಡ 27 ಬೆಳವಣಿಗೆ ದರ ದಾಖಲಿಸಲಿದೆ ಎಂದು ಅಧ್ಯಯನ ವರದಿ ಸೂಚಿಸಿದೆ.