ನವದೆಹಲಿ: ಭಾರೀ ಮಳೆಯಿಂದಾಗಿ ಬಿಹಾರದ ಎಂಟು ಜಿಲ್ಲೆಗಳು ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದು, ಈ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸೀತಾಮರಾಹಿ ಜಿಲ್ಲೆಯಲ್ಲಿ 39 ಸಾವಿರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದ ಪರಿಣಾಮವಾಗಿ ಶಿವ್ ಹರ್ ಜಿಲ್ಲೆಯಲ್ಲಿ 5178 ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಅಲ್ಲಿನ ಅರೋಗ್ಯ ಇಲಾಖೆ ತಿಳಿಸಿದೆ.
ತೈಲಬಾವಿ ಸ್ಫೋಟ; ಮೂವರು ವಿದೇಶಿ ತಜ್ಞರಿಗೆ ಗಾಯ
ಬಿಹಾರದ 8 ಜಿಲ್ಲೆಗಳ 38 ಬ್ಲಾಕ್’ಗಳಲ್ಲಿನ 217 ಪಂಚಾಯತ್ ವ್ಯಾಪ್ತಿಯಲ್ಲಿ 4,13,952 ಜನಸಂಖ್ಯೆಯಿದ್ದು, ಈ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಲ್ಲಿ ಸಿಲುಕಿರುವ 13,585 ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಅಸ್ಸಾಮ್ ನಲ್ಲೂ ಪ್ರವಾಹ ಭೀತಿ ಮುಂದುವರಿದಿದ್ದು, ಇಲ್ಲಿಯೂ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.