Newsics.Com
ನವದೆಹಲಿ: ಫೆಬ್ರವರಿ ಮಧ್ಯಭಾಗದ ವೇಳೆಗೆ ಗೋಧಿ ಮತ್ತು ಗೋಧಿ ಹಿಟ್ಟಿನ ದರ ಇನ್ನಷ್ಟು ಕಡಿಮೆಯಾಗಲಿದೆ.
ದೊಡ್ಡ ಮಟ್ಟದ ಖರೀದಿದಾರರು ಭಾರತೀಯ ಆಹಾರ ನಿಗಮದ ಹರಾಜಿನಿಂದ ಗೋಧಿ ಖರೀದಿಸುತ್ತಿದ್ದಂತೆಯೇ ದರ ಇಳಿಕೆಯಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮುಂದಿನ ಆರು ವಾರಗಳಲ್ಲಿ ಮುಕ್ತ ಮಾರುಕಟ್ಟೆಗೆ 30 ಲಕ್ಷ ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡಲು ಭಾರತೀಯ ಆಹಾರ ನಿಗಮವು ಟೆಂಡರ್ ಕರೆಯುತ್ತಿದ್ದಂತೆಯೇ ದೇಶದಲ್ಲಿ ಗೋಧಿ ದರ ತುಸು ಇಳಿಕೆಯಾಗಿದೆ.
ಮಾರುಕಟ್ಟೆಗಳಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ದರ ಕ್ವಿಂಟಲ್ಗೆ 2,950 ರೂ. ಆಗಿತ್ತು. ಶುಕ್ರವಾರ ಸಂಜೆ ವೇಳೆಗೆ ಮಧ್ಯ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಮಂಡಿಗಳಲ್ಲಿ ಗೋಧಿ ದರ ಶೇ 10ರಷ್ಟು ಇಳಿಕೆಯಾಗಿದೆ. ಇದೀಗ ವ್ಯಾಪಾರಿಗಳು ಪ್ರತಿ ಕ್ವಿಂಟಲ್ಗೆ 200 ರೂ.ನಷ್ಟು ದರ ಕಡಿತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.