newsics.com
ಕೊಲ್ಕತ್ತಾ: ಖ್ಯಾತ ಪುಟ್ಬಾಲ್ ಆಟಗಾರ ಸುಭಾಷ್ ಭೌಮಿಕ್(72) ನಿಧನ ಹೊಂದಿದ್ದಾರೆ. ಕಳೆದ ಹಲವು ತಿಂಗಳಿನಿಂದ ಸುಭಾಷ್ ಅಸ್ವಸ್ಥರಾಗಿದ್ದರು. ಮಧು ಮೇಹ ಸೇರಿದಂತೆ ಹಲವು ಕಾಯಿಲೆಗಳಿಂದ ಅವರು ಬಳಲುತ್ತಿದ್ದರು.
ಈಸ್ಟ್ ಬೆಂಗಾಲ್, ಮೋಹನ್ ಬಗಾನ್ ಸೇರಿದಂತೆ ಹಲವು ಖ್ಯಾತ ತಂಡಗಳ ಪರವಾಗಿ ಮೈದಾನಕ್ಕೆ ಇಳಿದಿದ್ದರು. ಕ್ರೀಡಾ ತರಬೇತುದಾರರಾಗಿ ಅವರು ಕೊಡುಗೆ ನೀಡಿದ್ದರು.
ಸುಭಾಷ್ ಭೌಮಿಕ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಶಿಷ್ಯರನ್ನು ಪುಚ್ಬಾಲ್ ಕ್ರೀಡೆಗೆ ಅವರು ಪರಿಚಯಿಸಿದ್ದರು.