newsics.com
ನವದೆಹಲಿ: ಅಸ್ಸಾಂನ ಏಕೈಕ ಮಹಿಳಾ ಮುಖ್ಯಮಂತ್ರಿಯಾಗಿದ್ದ ಸೈಯದಾ ಅನ್ವರಾ ತೈಮೂರ್ (84) ಸೋಮವಾರ ಆಸ್ಟ್ರೇಲಿಯಾದಲ್ಲಿ ನಿಧನರಾದರು.
ಕಾಂಗ್ರೆಸ್ ನ ನಾಯಕಿಯಾಗಿದ್ದ ಸೈಯದಾ 1980ರಲ್ಲಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. 1972, 1978, 1983, 1991ರಲ್ಲಿ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ‘ಸೈಯದಾ ತೈಮೂರ್ ಜಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅಸ್ಸಾಂನ ಅಭಿವೃದ್ಧಿಗೆ ಅವರ ಕೊಡುಗೆಗಳು ನೆನಪಿನಲ್ಲಿ ಉಳಿಯುವಂತಹದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ಮಾಜಿ ಸಿಎಂ ಸೈಯದಾ ನಿಧನ
Follow Us