newsics.com
ಮುಂಬೈ: ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಡೀನ್ ಜೋನ್ಸ್ ಹೃದಯಾಘಾತದಿಂದ ಮುಂಬೈನಲ್ಲಿ ಗುರುವಾರ ನಿಧನರಾದರು.
ಮುಂಬೈನ ಸೆವೆನ್ ಸ್ಟಾರ್ ಹೋಟೆಲ್’ನಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ತಂಡದ ಭಾಗವಾಗಿದ್ದ ಜೋನ್ಸ್, ದಕ್ಷಿಣ ಏಷ್ಯಾ ಕ್ರಿಕೆಟ್ ನೊಂದಿಗೆ ಆಪ್ತ ಸಂಬಂಧ ಹೊಂದಿದ್ದರು. ಹೊಸ ಪ್ರತಿಭೆಗಳನ್ನು ಹುಡುಕಿ ಪೋಷಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಒಬ್ಬ ಚಾಂಪಿಯನ್ ವ್ಯಾಖ್ಯಾನಕಾರರಾಗಿದ್ದರು ಎಂದು ಸ್ಟಾರ್ ಸ್ಪೋರ್ಟ್ಸ್ ಹೇಳಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಡೀನ್ ಜೋನ್ಸ್ ಇನ್ನಿಲ್ಲ
Follow Us