Wednesday, August 4, 2021

ಕೇಂದ್ರದ ಮಾಜಿ ಸಚಿವ ರಘುವಂಶ್‌ ಪ್ರಸಾದ್ ಸಿಂಗ್‌ ಇನ್ನಿಲ್ಲ

Follow Us

newsics.com
ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಹಾರ ನಾಯಕ ರಘುವಂಶ್‌ ಪ್ರಸಾದ್ ಸಿಂಗ್‌ (74) ಅವರು ಭಾನುವಾರ ಬೆಳಗ್ಗೆ ನಿಧನರಾದರು.
ಕೊರೋನಾ ಸೋಂಕಿನ ಬಳಿಕ ಕಾಣಿಸಿಕೊಂಡಿದ್ದ ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಅವರು ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್‌ನಲ್ಲಿ ಕೋವಿಡ್‌ ಪಾಸಿಟಿವ್‌ ಆಗಿದ್ದ ಬಿಹಾರ ಮುಖಂಡ ರಘುವಂಶ್ ಪ್ರಸಾದ್‌ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಕೋವಿಡ್‌ ಗುಣಮುಖರಾದ ನಂತರ ಮತ್ತೆ ಕಾಣಿಸಿಕೊಂಡಿದ್ದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕಳೆದ ಶುಕ್ರವಾರ ವೆಂಟಿಲೇಟರ್‌ ಸಹಕಾರದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ನರೇಗಾ ಯೋಜನೆ ಹಿಂದಿನ ಶಕ್ತಿ ಎಂದೇ ಅವರನ್ನು ಕಾಣಲಾಗುವ ರಘುವಂಶ್‌ ಪ್ರಸಾದ್ ಲೋಕಸಭೆಗೆ ದಾಖಲೆಯ ಐದು ಬಾರಿ ಆಯ್ಕೆಯಾಗಿದ್ದರು. ವೈಶಾಲಿ ಕ್ಷೇತ್ರದಲ್ಲಿ ಕಳೆದ ಎರಡೂ ಚುನಾವಣೆಗಳಲ್ಲಿ (2014 ಮತ್ತು 2019) ಅವರು ಸೋಲು ಕಂಡಿದ್ದರು.
ರಘುವಂಶ್‌ ಪ್ರಸಾದ್ ಅವರು ಕಳೆದ ಗುರುವಾರ (ಸೆ.10) ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷ ತೊರೆದಿದ್ದರು. ಈ ಸಂಬಂಧ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು.

ದೇಶದಲ್ಲಿ ಒಂದೇ ದಿನ 94, 372 ಮಂದಿಗೆ ಕೊರೋನಾ ಸೋಂಕು, 1114 ಬಲಿ

ನೇಪಾಳದಲ್ಲಿ ಭಾರೀ ಭೂ ಕುಸಿತ: 12 ಮಂದಿ ನಾಪತ್ತೆ

ಆಕ್ಸ್ ಫರ್ಡ್ ಕೊರೋನಾ ಲಸಿಕೆ ಪ್ರಯೋಗ ಪುನರಾರಂಭ

ಮತ್ತಷ್ಟು ಸುದ್ದಿಗಳು

Latest News

2023ರ ಡಿಸೆಂಬರ್ ವೇಳೆಗೆ ಅಯೋಧ್ಯೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತ

newsics.com ಅಯೋಧ್ಯೆ: ಭಾರತೀಯರು ಕಾಯುತ್ತಿದ್ದ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದೀಗ 2023ರ ಡಿಸೆಂಬರ್​​ ವೇಳೆಗೆ ಭಕ್ತರ ಪ್ರವೇಶಕ್ಕೆ ಮುಕ್ತ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿ ಕಳೆದ...

ಭೂಕಂಪದ ಮುನ್ಸೂಚನೆ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ

newsics.com ಉತ್ತರಾಖಂಡ್: ಭೂಕಂಪಗಳ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 'ಉತ್ತರಾಖಂಡ್ ಭೂಕಂಪ್ ಅಲರ್ಟ್' ಎನ್ನುವ ಅಪ್ಲಿಕೇಶನ್ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಂದು (ಆ.4)...

ಧರ್ಮಸ್ಥಳ, ಕುಕ್ಕೆ ದೇವಾಲಯ, ಕಟೀಲಿನಲ್ಲಿ ಸೇವೆ ಸ್ಥಗಿತ: ವಾರಾಂತ್ಯ ಭಕ್ತರಿಗೂ ನಿರ್ಬಂಧ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣ ನಾಳೆಯಿಂದ ಆ‌ 15ರವರೆಗೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಶನಿವಾರ, ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದ ದಿನ ಬೆಳಗ್ಗೆ...
- Advertisement -
error: Content is protected !!